ಮೆದುಳಿನ ಆರೋಗ್ಯ ಬಹು ಮುಖ್ಯ

Published on

ಕೊಪ್ಪಳ:ನಮ್ಮ ದೇಹವನ್ನು ನಿಯಂತ್ರಿಸುವ ಪ್ರಮುಖ ಅಂಗ ಮೆದುಳು. ಅದರ ಆರೋಗ್ಯದ ಬಗ್ಗೆ ನಾವು ಕಾಳಜಿ ಹೊಂದಿರಬೇಕೆಂದು ಜಿಲ್ಲಾ ಮಾನಸಿಕ ರೋಗ ಅನುಷ್ಠಾನಾಧಿಕಾರಿ ಡಾ.ಪ್ರಕಾಶ ಹೇಳಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಮೆದುಳು ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನಸಿಕ ಆರೋಗ್ಯ ವೃದ್ಧಿ ಮೂಲಕ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಅತಿಯಾದ ಒತ್ತಡ ಹೇರಬಾರದು. ಸದಾ ಲವಲವಿಕೆಯಿಂದರಬೇಕು. ಉತ್ತಮ ಆಹಾರ, ನಿದ್ರೆ, ದೈಹಿಕ ಚಟುವಟಿಕೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ.ಸಂಗನಬಸಪ್ಪ ಮಾತನಾಡಿ, ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವಿಕೆ ಮುಖ್ಯ. ಲಕ್ವಾ, ಪಿಟ್ಸ್​, ತಲೆ ನೋವು, ಮರೆವಿನ ಕಾಯಿಲೆ ಸೇರಿ ನರರೋಗಗಳು ಮೆದುಳಿಗೆ ಸಂಬಂಧಿಸಿವೆ. ಮೆದುಳು ಆರೋಗ್ಯವಾಗಿದ್ದರೆ ದೇಹದ ಆರೋಗ್ಯ ಚೆನ್ನಾಗಿರುತ್ತದೆ. ತುರ್ತು ಸಮಯದಲ್ಲಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಮಾತನಾಡಿ, ಆರೋಗ್ಯ ರಕ್ಷಣೆಗೆ ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಜಿಲ್ಲಾ, ತಾಲೂಕು, ಸಮುದಾಯ ಆಸ್ಪತ್ರೆಗಳಲ್ಲಿ ಹಲವು ಸೇವೆಗಳು ಲಭ್ಯ ಇವೆ. ಅವುಗಳ ಸದುಪಯೋಗ ಪಡೆಯುವಂತೆ ತಿಳಿಸಿದರು.

ಕರ್ನಾಟಕ ಬ್ರೌನ್​ ಹೆಲ್ತ್​ ಇನಿಶಿಯೇಟಿವ್​ ಜಿಲ್ಲಾ ಸಂಯೋಜಕ ನವೀನ್​ ಮಾತನಾಡಿ, ಆರೋಗ್ಯ ಇಲಾಖೆ ಹಾಗೂ ನಿಮ್ಹಾನ್ಸ್​ನಿಂದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಬೆನ್​ ಹೆಲ್ತ್​ ಕ್ಲಿನಿಕ್​ ಆರಂಭಿಸಲಾಗಿದೆ. ಪಾರ್ಸಿ, ಪಿಟ್ಸ್​, ತಲೆನೋವು, ಮರೆವಿನ ಕಾಯಿಲೆ ಹಾಗೂ ಇತರ ನರರೋಗ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದೆಂದರು. ಡಾ.ಬಸಂತ್​ ಕುಮಾರ್​ ಪಾಟೀಲ್​, ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net