

ಹುಮನಾಬಾದ್: ಅಸ್ವಸ್ಥರ ಮೂಲ ಹಕ್ಕುಗಳ ಕಾಪಾಡುವ ಜತೆಗೆ ಘನತೆ ಗೌರವಿಸುವ ಕ್ರಮಗಳನ್ನು ಅನುಸರಿಸಬೇಕು ಎಂದು ಜೆಎಂಎಫ್ ಹೆಚ್ಚುವರಿ ಸಿವಿಲï ನ್ಯಾಯಾಧೀಶ ಅಲ್ತಾಫ್ ಹುಸೇನ್ ಖನಗವಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಆಶ್ರಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ನಿಮಿತ್ತ ಬುಧವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಮಾತನಾಡಿ, ಪ್ರಸಕ್ತ ವರ್ಷ `ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು' ಎಂಬುದು ಪ್ರಸಕ್ತ ವರ್ಷದ ಘೋಷವಾಕ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿAದ ಅ.೧೦ರಂದು ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ದಿನ ಆಚರಿಸಲಾಗುವುದು ಎಂದರು.
ಸಂಪನ್ಮೂಲ ವ್ಯಕ್ತಿ ಡಾ.ರಿತೇಶ ಮಾತನಾಡಿ, ಮಾನಸಿಕ ಆರೋಗ್ಯ ಸಮಸ್ಯೆ, ಚಿಕಿತ್ಸಾ ಸೌಲಭ್ಯ, ಅಸ್ವಸ್ಥರ ಹಕ್ಕು, ಘನತೆ, ಸಮಾಜದ ಹೊಣೆ ಬಗ್ಗೆ ವಿವರಿಸಿದರು.
ವಕೀಲರ ಸಂಘದ ಅಧ್ಯಕ್ಷ ಹರೀಶ ಅಂಗಡಿ, ಉಪಾಧ್ಯಕ್ಷ ಅಶೋಕ ವರ್ಮಾ, ಕಾರ್ಯದರ್ಶಿ ಸಂತೋಷ ಸ್ವಾಮಿ, ಡಾ.ವಿಶ್ವ ಸೈನೀರ್, ಡಾ.ಮುಜಾಫರ್, ಡಾ.ಸುಭಾನ್, ಡಾ.ಮುಜತಾಬ್, ಶಿವಕುಮಾರ ಕಿವಡೆ ಇತರರಿದ್ದರು. ಗೀತಾರೆಡ್ಡಿ ಸ್ವಾಗತಿಸಿದರು. ಸುವರ್ಣಾಕುಮಾರಿ ವಂದಿಸಿದರು.