ಮೊಬೈಲ್ ದುರ್ಬಳಕೆಯಿಂದ ಖಿನ್ನತೆಗೆ ಆಹ್ವಾನ

web 4
Published on

ಧಾರವಾಡ: ಜನರು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅದರಲ್ಲೂ ಯವಪೀಳಿಗೆ ಮೊಬೈಲ್ ದುರ್ಬಳಕೆಯಿಂದ ದಾರಿ ತಪ್ಪಿ ಆತಂಕ, ಒತ್ತಡ ಹಾಗೂ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಯುವಕರು ಸರಿಯಾದ ದಾರಿಯನ್ನು ಆರಿಸಿಕೊಂಡು ನಡೆಯಬೇಕು ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಹಾಲ್‌ನಲ್ಲಿ ಕವಿವಿ ಹಾಗೂ ರೋಟರಿ ಕಬ್ಲ್ ಆಫ್ ಬೇಲೂರ ಮತ್ತು ರೋಟರಿ ಕಬ್ಲ್ ಆಫ್ ಸೆವೆನ್ ಹಿಲ್ಸ್ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಎಂದರೆ ಕೇವಲ ದೈಹಿಕ ಆರೋಗ್ಯ ಅಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಯೋಗಕ್ಷೇಮದಿಂದ ಇರುವುದು ಆರೋಗ್ಯ ಎಂದರು.
ಜನರು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅದರಲ್ಲೂ ಯವಪೀಳಿಗೆ ಮೊಬೈಲ್ ದುರ್ಬಳಕೆಯಿಂದ ದಾರಿ ತಪ್ಪಿ ಆತಂಕ, ಒತ್ತಡ ಹಾಗೂ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಯುವಕರು ಸರಿಯಾದ ದಾರಿಯನ್ನು ಆರಿಸಿಕೊಂಡು ನಡೆಯಬೇಕು ಎಂದರು.
ಕವಿವಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಸಂಗಿತಾ ಮಾನೆ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್‌ನ ಸಹಾಯಕ ಗವರ್ನರ್  ರೋಟೆರಿಯನ್ ಡಾ. ಗೌರಿ ತಾವರಗೇರಿ, ರೋಟರಿ ಕ್ಲಬ್ ಆಫ್ ಬೇಲೂರ ಕಾರ್ಯದರ್ಶಿ ರೋಟೆರಿಯನ್‌ಪಿ.ಸಿ. ಗೋಡಿ ಮತ್ತು ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್‌ನ ಕಾರ್ಯದರ್ಶಿ ರೋಟೆರಿಯನ್ ರಂಜಿತಾ ಜಾಧವ, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ. ರೇಣುಕಾ ಅಸಗಿ, ಅಪರಾಧಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಿ.ಎಸ್. ವೇಣುಮಾಧವ, ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಸ್.ವಿ. ಕಾಂಬ್ಳೆ , ಡಾ. ಶೌಕತ ಅಜಿಮ್, ಇತರರಿದ್ದರು.
ರೋಟೆರಿಯನ್ ಸುಮನ್ ಹೆಬ್ಳೀಕರ ನಿರೂಪಿಸಿದರು. ಬೋಧನಾ ಸಹಾಯಕ ಪ್ರಾಧ್ಯಾಪಕ ವೀರೇಶ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net