ನ.೨೫ ರಿಂದ ಡಿ೯ರ ವರೆಗೆ ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ

a5fee0b5-fcb1-4c09-adc4-05bc6a4fff37
Published on

ಮಡಿಕೇರಿ: ಮಾನಸಿಕ ಆರೋಗ್ಯ ಮತ್ತು ಮಹತ್ವದ ಕುರಿತು ಅರಿವು ಮೂಡಿಸುವ ಸಲುವಾಗಿ ಮೈಂಡ್ ಅ್ಯಂಡ್ ಮ್ಯಾಟರ್ ಸಂಸ್ಥೆಯ ಎರಡನೇ "ಪೇಂಟ್ ಎ ವಾಲ್" ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ ನ.೨೫ ರಿಂದ ಡಿ೯ರ ವರೆಗೆ ಮಡಿಕೇರಿಯ ದಿ ವೀಲ್ ಕೆಫೆಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಟ್ರಸ್ಟಿ ಹಾಗೂ ಅಡಿಯೋಲಾಜಿಸ್ಟ್ ಅಚ್ಚಯ್ಯ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೨ ಗಂಟೆಯಿಂದ ಸಂಜೆ ೬ ಗಂಟೆವರೆಗೆ ಅಭಿಯಾನ ಹಮ್ಮಿಕೊಂಡಿದ್ದು, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಾನಸಿಕ ಆರೋಗ್ಯದ ಬಗೆಗಿನ ಅಪನಂಬಿಕೆ ತೊಡೆದುಹಾಕಿ ಅರಿವು ಮೂಡಿಸಲಾಗುವುದು. ನ೨೫, ೨೬ ಮತ್ತು ೨೭ ರಂದು ಸಂಜೆ ೭ ಗಂಟೆಯಿಂದ ೯ರ ವರೆಗೆ ಕಲಾವಿದರಾದ ರಘು ವಿನೆಸ್ಟೋರ್ ರಘು ಗೌಡ, ಭೂಮಿ ಶೆಟ್ಟಿ, ನಂದು, ಸೌಮ್ಯ ಕಾಶಿ, ಉರ್ಮಿ, ಸಿದ್ಧಾರ್ಥ್ ವೆಂಕಟ್, ವಿನೀತ್ ಜೋಸೆ, ಮನು ಮತ್ತು ಅನೇಕ ಸಂಗೀತಗಾರರು ಮತ್ತು ಕಲಾವಿದರು ಆಗಮಿಸಲಿದ್ದು, ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಟ್ರಸ್ಟಿ ದೀಪಿಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net