

ಮಂಡ್ಯ: ವಿದ್ಯಾರ್ಥಿಗಳು ವಿನಾ ಕಾರಣ ಖಿನ್ನತೆಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದು, ಸೂಕ್ತ ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಬೇಕು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ದಾದಿ ಅಮೃತಾ ಹೇಳಿದರು.
ತಾಲೂಕಿನ ಹೊಡಾಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ಮತ್ತು ಜೀವನ ಕೌಶಲಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ವ್ಯಸನಿ ಹಾಗೂ ಮೊಬೈಲ್ ಹೆಚ್ಚು ಬಳಕೆ ಮಾಡುವವರಿಗೆ ಸಿಜೋಪೋಮಿಯಾ, ಸೈಕೋಸಿಸ್‌ನಂತಹ ಮಾನಸಿಕ ಕಾಯಿಲೆ ಲಕ್ಷಣಗಳು ಕಂಡು ಬರುತ್ತದೆ. ಮೊದಲು ಸ್ನೇಹದಿಂದ ಕಲಿತು ಬಳಿಕ ದುಶ್ಚಟಕ್ಕೆ ದಾಸರಾಗುತ್ತಾರೆ. ಮಾನಸಿಕ ಕಾಯಿಲೆಯನ್ನು ಕೇವಲ ಔಷಧಬಳಕೆ ಮಾಡಿದರೆ ವಾಸಿಯಾಗುವುದಿಲ್ಲ. ಆಪ್ತ ಸಮಾಲೋಚನೆ ಮಾಡಿಸಬೇಕು ಎಂದರು.
ಸೈಕಾಲಜಿಸ್ಟ್ ವಸೀಮಾ ಜಾನ್ ವಿದ್ಯಾರ್ಥಿಗಳ ಜತೆ ಆಪ್ತ ಸಮಾಲೋಚನೆ ನಡೆಸಿದರು. ಸಹ ಶಿಕ್ಷಕರಾದ ಕೆ.ಆರ್.ಶಶಿಧರ ಈಚಗೆರೆ, ಬಿ.ಸಿ.ಶಿಲ್ಪಾ, ಸಮುದಾಯ ಆರೋಗ್ಯಾಧಿಕಾರಿ ರಮ್ಯಾ ಇದ್ದರು.