ಮಾನಸಿಕ ಕಿರುಕುಳ ಆರೋಪ, ಪತಿ ವಿರುದ್ಧ ಪತ್ನಿ ದೂರು

police
Published on

ಬೆಳಗಾವಿ: ತನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ ಪತಿ ಬಸವರಾಜ ಮರಲಿಂಗಣ್ಣವರ ವಿರುದ್ಧ ಪತ್ನಿ ಸುಚಿತ್ರಾ ಎಂಬುವರು ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದಾರೆ.

ಗೋಕಾಕ ತಾಲೂಕಿನ ಅಕ್ಕತಂಗೇರಹಾಳದ ಬಸವರಾಜ ಅವರೊಂದಿಗೆ 2012ರ ಆ. 2ರಂದು ವಿವಾಹವಾಗಿತ್ತು. ಅಂದಿನಿಂದಲೂ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತ ಬಂದಿದ್ದಾರೆ. ಈಚೆಗೆ ಬೆಳಗಾವಿಗೆ ವರ್ಗಾವಣೆಗೊಂಡಿದ್ದು, ನೆಹರು ನಗರದಲ್ಲಿ ಪ್ರತ್ಯೇಕವಾಗಿ ವಾಸವಿದ್ದಾರೆ.

ನಾನು ಆಜಾದ್ ಗಲ್ಲಿಯಲ್ಲಿ ತಂದೆ ಶಿವನಗೌಡ ಪಾಟೀಲ ಮನೆಯಲ್ಲಿ ವಾಸವಿದ್ದೇನೆ. ಬೆಳಗಾವಿಯಲ್ಲೇ ಇದ್ದರೂ ಮನೆಗೆ ಬರುತ್ತಿಲ್ಲ. ಮನವೊಲಿಕೆಗಾಗಿ ನಾನು ಮತ್ತು ನನ್ನ ತಂದೆ ಜು. 10ರಂದು ನೆಹರು ನಗರಕ್ಕೆ ಹೋದಾಗ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ತನಿಖೆ ಹಂತದಲ್ಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net