ದೇವರ ಪೂಜೆಯಿಂದ ಮಾನಸಿಕ ನೆಮ್ಮದಿ, ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಅಭಿಮತ, ನಂದಗುಡಿಯಲ್ಲಿ ಬೀರೇಶ್ವರ ದೇವರ ಉತ್ಸವ

26 Nandagudi 3 Beeredevru
Published on

ನಂದಗುಡಿ: ಜೀವನದಲ್ಲಿ ಧಾರ್ಮಿಕ ಮೌಲ್ಯ ಅಳವಡಿಸಿಕೊಳ್ಳಲು ದೇವಾಲಯ ಅವಶ್ಯಕ. ದೇವರಲ್ಲಿ ಭಕ್ತಿಭಾವದಿಂದ ಸ್ಮರಣೆ ಮಾಡಿದರೆ ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ ಎಂದು ಕಾಗಿನೆಲೆ ತಿಂತಿಣಿ ಮಹಾ ಸಂಸ್ಥಾನ ಗುರು ಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ನಲ್ಲೂರು ಹಾಗೂ ವಡಿಗೇನಹಳ್ಳಿ ಬೀರೇಶ್ವರ, ಮೇಲೂರು ಭತ್ತೇಶ್ವರ ಹಾಗೂ ನಂದಗುಡಿ ಶ್ರೀ ಬೀರೇದೇವರು ದೇವಾಲಯ ಸೇವಾ ಟ್ರಸ್ಟ್ ವಿಜಯದಶಮಿ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ದೇವರ ಉತ್ಸದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿನಿತ್ಯ ದೇವರ ಧ್ಯಾನ ಮಾಡಬೇಕು. ಪ್ರತಿಯೊಬ್ಬರ ನಡೆ, ನುಡಿ, ಆಚಾರ-ವಿಚಾರಗಳೂ ಬದಲಾವಣೆಯಾಗಬೇಕು. ಭಕ್ತಿ ಭಾ

ವನೆಯಿಂದ ಆಚರಣೆ ನಡೆಯಬೇಕು. ಜೀವನದಲ್ಲಿ ಒಳ್ಳೆಯ ಕೆಲಸ ಮಾಡಬೇಕಾದರೆ ನಿರಂತರವಾಗಿ ಪ್ರಯತ್ನಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮಾತನಾಡಿ, ದೇವರು ಬಯಸುವುದು ಪ್ರತಿಯೊಬ್ಬರೂ ಪರಸ್ವರ ಪ್ರೀತಿ, ವಿಶ್ವಾಸ, ಗೌರವದಿಂದ ಬದುಕಬೇಕು ಎಂಬುದನ್ನು. ದೇವರಿಗೆ ಎಲ್ಲ ಜಾತಿ, ಧರ್ಮದವರು ಒಂದೇ. ಸಮಾನತೆಯಿಂದ ಬದುಕುವ ವಾತಾವರಣ ಕಲ್ಪಿಸಬೇಕು ಎಂದರು.

ಟ್ರಸ್ಟ್ ಜಂಟಿ ಕಾರ್ಯದರ್ಶಿ ಕೆ ಅರ್ ಪ್ರಭಾವತಮ್ಮ ಮಾತನಾಡಿದರು. ನಂದಗುಡಿ ಪ್ರಮುಖ ಬೀದಿಗಳಲ್ಲಿ ಪಟ್ಟದ ದೇವರನ್ನು ಮೆರವಣಿಗೆ ನಡೆಲಾಯಿತು. ಒಕ್ಕಲು ಮಕ್ಕಳು ತಲೆಯಿಂದ ತೆಂಗಿನ ಕಾಯಿ ಒಡೆದರು.

ನಂದಗುಡಿ ಜಿಪಂ ಸದಸ್ಯ ಸಿ. ನಾಗರಾಜ್, ಟ್ರಸ್ಟ್ ಅಧ್ಯಕ್ಷ ಸೋಮಣ್ಣ, ಕಾರ್ಯದರ್ಶಿ ಕೋಲಾರ ಮುನಿನಾರಾಯಣಪ್ಪ, ಜಂಟಿ ಕಾರ್ಯದರ್ಶಿ ಪ್ರಭಾವತಮ್ಮ, ಖಜಾಂಚಿ ಮುನಿರಾಜ್, ನಿರ್ದೇಶಕರಾದ ಮಂಜುನಾಥ್, ತಬಸಪ್ಪ, ರಾಜೇಶ್, ವಕೀಲರ ಸಂಘದ ಮಾಜಿ ಅಧ್ಯಕ್ಷ ವೆಂಕಟಸ್ವಾಮಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net