ಮಾನಸಿಕ ಸಮತೋಲನಕ್ಕೆ ಧ್ಯಾನ ಅಗತ್ಯ

Mental Balance, Meditation, Devahipparagi, Panchakshari Minchanala, Siddheshwar Swamiji, Moksha, Peace,
ದೇವರಹಿಪ್ಪರಗಿ ಪಟ್ಟಣದ ಸಿದ್ಧೇಶ್ವರ ಸ್ವಾಮೀಜಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು. ಪಂಚಾಕ್ಷರಿ ಮಿಂಚನಾಳ, ಸಿ.ಕೆ.ಕುದರಿ, ವಿ.ಕೆ.ಪಾಟೀಲ ಇತರರಿದ್ದರು.
Published on

ದೇವರಹಿಪ್ಪರಗಿ: ಬೌದ್ಧಿಕ, ಶಾರೀರಿಕ ಮತ್ತು ಮಾನಸಿಕ ಸಮತೋಲನಕ್ಕೆ ಧ್ಯಾನ ಅಗತ್ಯವಾಗಿದೆ ಎಂದು ಯೋಗಸಾಧಕ ಪಂಚಾಕ್ಷರಿ ಮಿಂಚನಾಳ ಹೇಳಿದರು.

ಪಟ್ಟಣದ ಸಿದ್ಧೇಶ್ವರ ಸ್ವಾಮೀಜಿ ಕಾಲೇಜು ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧ್ಯಾನ ಯೋಗದ ಅಂಗಗಳಲ್ಲಿ ಒಂದು. ಧ್ಯಾನವೇ ಮೋಕ್ಷಕ್ಕೆ ಮೂಲಸಾಧನ ಎಂದು ನಮ್ಮ ಪರಂಪರೆಯ ನಂಬಿಕೆಯಾಗಿದೆ. ನಮ್ಮ ಕಣ್ಣಿಗೆ ಕಾಣದ ಮೋಕ್ಷದ ವಿಷಯ ಬೇಡ ನಮ್ಮ ದೈನಂದಿನ ಜೀವನಕ್ಕೆ ಶಾಂತಿ ಪಡೆಯಲು ಧ್ಯಾನ ಅಳವಡಿಸಿಕೊಳ್ಳಬೇಕು. ಜೂನ್ 21 ಯೋಗದಿನವಾದರೆ, ಡಿಸೆಂಬರ್ 21 ಧ್ಯಾನ ದಿನವಾಗಿದೆ. ಭೂಮಿಯ ಪರಿಭ್ರಮಣೆಯ ಆಧಾರದ ಮೇಲೆ ಈ ದಿನಗಳ ಆಚರಣೆ ಅತ್ಯಂತ ಸಮಂಜಸವಾಗಿದೆ ಎಂದರು.

ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಕೆ.ಕುದರಿ ಪ್ರಾಸ್ತಾವಿಕವಾಗಿ ಮಾತನಾಡಿ, ಧ್ಯಾನ ಹಾಗೂ ಯೋಗ ಒಂದಕ್ಕೊಂದು ಪೂರಕವಾಗಿ ನಮ್ಮ ಮನಸ್ಸು ಹಾಗೂ ಶರೀರದ ಮೇಲೆ ಬೀರುವ ಪ್ರಭಾವ ಬೀರುತ್ತವೆ ಎಂದರು.

ಮಕ್ಕಳಿಂದ ಪ್ರಾರ್ಥನೆ ನಂತರ ಯೋಗಸಾಧಕರಿಂದ ಧ್ಯಾನ ಕಾರ್ಯಕ್ರಮ ಜರುಗಿತು. ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆಯ ವಿ.ಕೆ.ಪಾಟೀಲ, ನಿವೃತ್ತ ಶಿಕ್ಷಕ ಲಕ್ಷ್ಮಣ ಮಡ್ಡೇಪ್ಪಗೋಳ, ಉದ್ಯಮಿ ಕೆ.ಎಸ್.ಕೋರಿ, ನಾಗಯ್ಯ ಹಿರೇಮಠ, ಪಿ.ಸಿ.ತಳಕೇರಿ, ಸಂಗನಬಸು ನಂದ್ಯಾಳ, ರಾಜು ಕಾಖಂಡಕಿ, ಆನಂದ ಎ.ಕೆ., ಸಿದ್ದು ಮೇಲಿನಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net