

ಕಿನ್ನಿಗೋಳಿ: ವಿದ್ಯಾರ್ಥಿಗಳಿಗೆ ವಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ ಅಗತ್ಯ. ಪ್ರತಿಭಾ ಕಾರಂಜಿ ಮೂಲಕ ವಿವಿಧ ಸ್ಪರ್ಧೆ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಕಿನ್ನಿಗೋಳಿ ಮೇರಿಮೇಲ್ ಆಂಗ್ಲ ವಾಧ್ಯಮ ಪ್ರೌಢಶಾಲೆಯಲ್ಲಿ ದ.ಕ. ಜಿಲ್ಲಾ ಪಂಚಾಯಿತಿ ಶಿಕ್ಷಣ ಇಲಾಖೆ ಮಂಗಳೂರು ಉತ್ತರ ವಲಯದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ 2024 ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಸಂಚಾಲಕಿ ಮೋರಿಸ್ ಬಿ.ಎಸ್. ಮಾತನಾಡಿ, ಶಾಲಾ ಶಿಕ್ಷಣದ ಜತೆಗೆ ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿ ಭೌತಿಕ ಮಟ್ಟ ಬೆಳೆಯಲಿದೆ. ಮುಂದಿನ ಭವಿಷ್ಯದ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್ ಕೆ., ಕ್ಷೇತ್ರ ಸಮನ್ವಯಾಧಿಕಾರಿ ವೇದಾವತಿ ರಾವ್, ಪ್ರಾಂತ್ಯಾಧಿಕಾರಿ ಫ್ಲಾವಿಯ ಬಿ.ಎಸ್., ಪ್ರೇಮಲತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಅಧ್ಯಕ್ಷ ಜಯರಾಮ್, ಅಧಿಕಾರಿ ವಾಸುದೇವ ರಾವ್, ನಿತಿನ್ ಪುತ್ರನ್, ನೋಡಲ್ ಅಧಿಕಾರಿ ರಮೇಶ್ ಆಚಾರ್, ಶಾಲಾ ಶಿಕ್ಷಕ ರಕ್ಷಕ ಸಂದ ಉಪಾಧ್ಯಕ್ಷೆ ವೀರಾ ವಾಸ್ ಮತ್ತಿತರರಿದ್ದರು.
ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ನೋ ಸ್ವಾಗತಿಸಿದರು. ಶಾಲಾ ಸಂಚಾಲಕಿ ಮೋರಿಸ್ ಬಿ.ಎಸ್., ಶಿಕ್ಷಕಿ ಚಿತ್ರಶ್ರೀ ನಿರೂಪಿಸಿದರು. ಮುಖ್ಯ ಶಿಕ್ಷಕಿ ಜೇಸಿಂತಾ ಡಿಸೋಜ ಬಿ.ಎಸ್. ವಂದಿಸಿದರು.
ಪ್ರತಿಭಾ ಕಾರಂಜಿ ಹಾಗೂ ಶಾಲಾ ಮಟ್ಟದ ಕ್ರೀಡಾಕೂಟಗಳಿಗೆ ಸರ್ಕಾರದ ಮಟ್ಟದಿಂದ ಪ್ರೋತ್ಸಾಹ ಹಾಗೂ ಹೆಚ್ಚಿನ ಅನುದಾನ ದೊರೆಯುತ್ತಿಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾವಿಸಿದ್ದೆ. ಆದರೆ ಉತ್ತರ ದೊರಕಲಿಲ್ಲ. ಇದರಿಂದಾಗಿ ಶಾಲೆಗಳು ಒದ್ದಾಟದಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ. - ಉಮಾನಾಥ ಕೋಟ್ಯಾನ್, ಶಾಸಕ. https://www.vijayavani.net/uncollected-sand-in-the-river https://www.vijayavani.net/immense-crop-damage-due-to-the-attack-of-wild-boars