

ಮೆಣಸಗಿ: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪುಂಡಲೀಕಪ್ಪ ಬಸಪ್ಪ ಅಸೂಟಿ ಸೋಮವಾರ ಆಯ್ಕೆಯಾಗಿದ್ದಾರೆ. ಒಟ್ಟು 19 ಸದಸ್ಯ ಬಲದ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪುಂಡಲೀಕಪ್ಪ ಬಸಪ್ಪ ಅಸೂಟಿ ಹಾಗೂ ಯಲ್ಲಪ್ಪ ಯಲಿಗಾರ ಸ್ಪರ್ಧಿಸಿದ್ದರು. ಪುಂಡಲಿಕಪ್ಪ 14 ಮತ ಪಡೆದರೆ, ಯಲ್ಲಪ್ಪ 5 ಮತಗಳಷ್ಟೇ ಪಡೆದರು. ಪುಂಡಲೀಕಪ್ಪ ಅಸೂಟಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ತಾಪಂ ಇಒ ಚಂದ್ರಶೇಖರ ಕುಂದಕೂರ ಪ್ರಕಟಿಸಿದರು. ಚುನಾವಣೆ ನಂತರ ಬೆಂಬಲಿಗರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಮಾತನಾಡಿದ ಸತತವಾಗಿ ಆರು ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೆಣಸಗಿ ಗ್ರಾಪಂನಲ್ಲಿ ಅಧಿಕಾರಕ್ಕೆ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಹಿರೇಮಠ ತಿಳಿಸಿದ್ದಾರೆ. ಪಿಡಿಒ ಎಂ.ಎಸ್. ಜಂಗಣ್ಣವರ, ಕಾಂಗ್ರೆಸ್ ಪಕ್ಷದ ಹಿರಿಯರಾದ ವಾಸಪ್ಪ ತೋಟರ, ಮಲ್ಲಪ್ಪ ಬೆಳವಣಕಿ, ನೀಲಪ್ಪ ಹುಡೇದ, ಶಿವಾನಂದ ಯಲಿಗಾರ, ಫಕೀರಪ್ಪ ತೋಟದ, ಈಶ್ವರ ಮುದೇನೂರು, ಶೇಖಪ್ಪ ಕುಸ್ತಿ, ಯಲ್ಲಪ್ಪ ಗಡ್ಡಿ, ಗಿರೀಶ ವಡ್ಡರ, ಲಿಂಗರಾಜ ಶಿಂದೆ, ಸುರೇಶ ಗೌಡ, ಮೀನಾಕ್ಷಿ ಯಲಿಗಾರ, ವಿಜಯಲಕ್ಷ್ಮೀ ಸಾಲಿಮಠ, ಶಾರದ ಮಾದರ, ಮಹಾದೇವಿ ಸೂಡಿ, ಯಲ್ಲವ್ವ ಜಮನಕಟ್ಟಿ, ವಿಜಯಲಕ್ಷ್ಮಿ ಛಲವಾದಿ, ಅಡಿವೆವ್ವ ತಳವಾರ, ಮಲ್ಲಪ್ಪ ಹೋಳಿಗೆ, ಶೀಲಾ ಪಾಟೀಲ, ಭೀಮಪ್ಪ ಮಾದರ, ಇತರರಿದ್ದರು.