ನೇಣು ಬಿಗಿದುಕೊಂಡು ಆತ್ಮಹತ್ಯೆ

sucide
ಸಾಂದರ್ಭಿಕ ಚಿತ್ರ
Published on

ರಾಯಲ್ಪಾಡು: ರಾಯಲ್ಪಾಡು ಠಾಣಾ ವ್ಯಾಪ್ತಿಯ ಲಕ್ಷ್ಮೀಪುರ ಕ್ರಾಸ್​ ಬಳಿಯ ಮಾವಿನ ತೋಟದಲ್ಲಿ ಭಾನುವಾರ ವ್ಯಕ್ತಿಯೊಬ್ಬ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆನೇಕಲ್​ನ ಚಂದಾಪುರ ಬಳಿಯ ಈಳಲಗಿ ಗ್ರಾಮದ ಯಲ್ಲಾರೆಡ್ಡಿ (70) ಮೃತ.
ಸ್ಥಳಕ್ಕೆ ಭೇಟಿ ನೀಡಿದ ರಾಯಲ್ಪಾಡು ಠಾಣಾಧಿಕಾರಿ ಹೇಮಂತ್​ ಮೃತರ ಕುಟುಂಬದವರನ್ನು ವಿಚಾರಿಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಶ್ರೀನಿವಾಸಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸದರು.
ಪೊಲೀಸ್​ ಸಿಬ್ಬಂದಿ ಆಂಜಿ, ಮುರಳಿ, ರೆಡ್ಡಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net