ನೀರಲ್ಲಿ ಮುಳುಗಿ ಯುವಕ ಸಾವು

Shridahara
Published on

ಬೆಳ್ತಂಗಡಿ: ಪಟ್ರಮೆ ಕೂಡಿಗೆ ಪರಪ್ಪು ಎಂಬಲ್ಲಿ ಗುರುವಾರ ನೇತ್ರಾವತಿ ನದಿಗೆ ಸ್ನಾನಕ್ಕೆ ಹೋಗಿದ್ದ ಯುವಕ ಶ್ರೀಧರ ಎಂಬುವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಧರ್ಮಸ್ಥಳ ನಿವಾಸಿಗಳಾದ ಶ್ರೀಧರ, ನವೀನ್, ವಸಂತ, ಯತೀಶ ಮಧ್ಯಾಹ್ನ ನದಿಗೆ ಸ್ನಾನಕ್ಕೆ ಹೋಗಿದ್ದರು. ನಾಲ್ವರಲ್ಲಿ ಶ್ರೀಧರ ಎಂಬುವರು ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net