ಜ್ಞಾಪಕ ಶಕ್ತಿ ಪ್ರದರ್ಶನ; ದಾಖಲೆ ಬರೆದ ರುತ್ವಿಕ್ ನಡಟ್ಟಿ

RUTVIK R NADATTI
ರುತ್ವಿಕ್ ಆರ್. ನಡಟ್ಟಿ
Published on

ವಿಜಯಪುರ: ಕೇವಲ 3.8 ವರ್ಷ ಕಂದಮ್ಮವೊಂದು ಹೂವುಗಳ ಹೆಸರು, ರಾಘವೇಂದ್ರ ಮಂತ್ರ ಹಾಗೂ ದೇವಾನುದೇವತೆಗಳ ಹೆಸರು ಗುರುತಿಸುವ ಮೂಲಕ ‘ಕರ್ನಾಟಕ ಅಚೀವರ್ಸ್ ಬುಕ್ ಆಫ್ ರಿಕಾಡ್ಸ್’ಗೆ ಭಾಜನವಾಗುವ ಮೂಲಕ ಗುಮ್ಮಟ ನಗರದ ಕೀರ್ತಿ ಹೆಚ್ಚಿಸಿದೆ.

ಸ್ಥಳೀಯ ಐಶ್ವರ್ಯ ನಗರದ ಆಶ್ರಮ ರಸ್ತೆಯ ನಿವಾಸಿಯಾಗಿರುವ ರವಿ ಮತ್ತು ಭಾಗ್ಯಶ್ರೀ ದಂಪತಿಯ ಪುತ್ರ ರುತ್ವಿಕ್ ಆರ್. ನಡಟ್ಟಿ ಇಂಥದ್ದೊಂದು ದಾಖಲೆ ಬರೆದಿದ್ದಾನೆ. ಕಳೆದ ಜೂ.23ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚು ವಸ್ತುಗಳನ್ನು ಗುರುತಿಸುವ ಮೂಲಕ ಜ್ಞಾಪಕ ಶಕ್ತಿ ಪ್ರದರ್ಶಿಸುವ ವಿಭಾಗದಲ್ಲಿ ರುತ್ವಿಕ್ ಸಾಧನೆ ಮೆರೆದಿದ್ದಾರೆ.

ಹೂವುಗಳ ಹೆಸರು, ರಾಘವೇಂದ್ರ ಮಂತ್ರ, ದೇವತೆಗಳ ಹೆಸರು (12), ಕಾರ್ಟೂನ್ ಚಿತ್ರಗಳ ಹೆಸರು (13), ಮಗುವಿನ ಅಂಗಗಳು, ಗೃಹಗಳ ಹೆಸರು (8), ರಾಜಕಾರಣಿಗಳು, ಸ್ವಾತಂತ್ರೃ ಹೋರಾಟಗಾರರು, ಸಾಹಿತಿಗಳು, ವಿಜ್ಞಾನಿಗಳು, ಚಲನಚಿತ್ರ ನಟರು, ಕ್ರಿಕೆಟ್ ತಾರೆಯರು (60), ಪ್ರಾಣಿಗಳು (25), ಹಣ್ಣುಗಳು (22), ವಾಹನಗಳ ಹೆಸರು (20), ವಾರಗಳು, ರಾಜ್ಯದ ರಾಜಧಾನಿಗಳು (28), ಅಂಕಿಗಳು, ತಿಂಗಳುಗಳು ಹೀಗೆ ಮುಂತಾದವುಗಳ ಕುರಿತು ಜ್ಞಾಪಕ ಶಕ್ತಿ ಪ್ರದರ್ಶನ ಮಾಡುವ ಮೂಲಕ ರುತ್ವಿಕ್ ದಾಖಲೆ ಬರೆದಿದ್ದು, ಪ್ರಮಾಣ ಪತ್ರ, ಪದಕ ನೀಡಿ ಗೌರವಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net