ಸಿಎನ್‌ಸಿಯಿಂದ ಹಿರಿಯರ ಸ್ಮರಣೆ

cnc
Published on

ಮಡಿಕೇರಿ: ದೇವಟ್ ಪರಂಬು ಹತ್ಯಾಕಾಂಡದ ೨೩೯ನೇ ವರ್ಷಾಚರಣೆ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಹಿರಿಯರಿಗೆ ಶ್ರದ್ಧಾಂಜಲಿ ಸಲ್ಲಿಸಿತು.

ಕೊಡವ ನರಮೇಧ ಸ್ಮಾರಕ ಸಮಾಧಿಯಲ್ಲಿ ಪುಷ್ಪ ನಮನ ಸಲ್ಲಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ಹಿರಿಯರಿಗೆ ಗೌರವ ಅರ್ಪಿಸಿದರು.

ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ, ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕುಗಳೊಂದಿಗೆ ಕೊಡವ ಸ್ವಯಂ ಆಡಳಿತ ಲ್ಯಾಂಡ್ ಅನ್ನು ರೂಪಿಸಬೇಕು. ದೇವಾಟ್‌ಪರಂಬ್‌ನಲ್ಲಿ ಅಂತರಾಷ್ಟ್ರೀಯ ಕೊಡವ ಜನಾಂಗೀಯ ಹತ್ಯೆಯ ಸ್ಮಾರಕ ನಿರ್ಮಿಸಬೇಕು. ಕೊಡವ ಸಂಸ್ಕಾರ ಗನ್ ಸಂಪ್ರದಾಯವನ್ನು ಸಾಂವಿಧಾನಿಕವಾಗಿ ರಕ್ಷಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪುಲ್ಲೇರ ಸ್ವಾತಿ ಕಾಳಪ್ಪ, ಅರೆಯಡ ಸವಿತಾ, ಚೋಳಪಂಡ ಜ್ಯೋತಿ ನಾಣಯ್ಯ, ಮಂಗೇರಿರ ಗೀತಾ, ಮಂಗೇರಿರ ಸುಮಿತಾ ಜಗದೀಶ್, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಚಂಬಂಡ ಜನತ್, ಅಜ್ಜಿಕುಟ್ಟೀರ ಲೋಕೇಶ್, ಮಂದಪಂಡ ಮನೋಜ್, ಡಾ.ಬೊವೇರಿಯಂಡ ಉತ್ತಯ್ಯ, ಮಣೊಟ್ಟೀರ ಚಿನ್ನಪ್ಪ, ಬೇಪಡಿಯಂಡ ಬಿದ್ದಪ, ಬೇಪಡಿಯಂಡ ದಿನು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net