ಚಿಕ್ಕಹೊಸೂರಿನಲ್ಲಿ ಸಂಧಾನ ಶಿಲ್ಪಿ ಸ್ಮರಣೆ

oppo_0
ಚಿಕ್ಕಹೊಸೂರು ಗ್ರಾಮದಲ್ಲಿ ಆಯೋಜಿಸ್ದಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಕೆ.ಬಿ.ರಾಜು, ಸಿ.ಎಸ್.ರೇಣುಕಸ್ವಾಮಿ, ರವಿಕುಮಾರ್, ಗೀತಾ, ರಾಜಪ್ಪ, ಸುಬ್ರಮಣ್ಯ ಇದ್ದರು.
Published on

ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಚಿಕ್ಕಹೊಸೂರು ಗ್ರಾಮದಲ್ಲಿ ಜೈ ಭೀಮ್ ಯೂತ್ಸ್ ವತಿಯಿಂದ ಭಾನುವಾರ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನಾ ಸಂಚಾಲಕ ಕೆ.ಬಿ.ರಾಜು, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಅಂಬೇಡ್ಕರ್ ಅವರ ಜೀವನವೇ ನಮ್ಮೆಲ್ಲರಿಗೂ ಆದರ್ಶ ಎಂದರು.

ಶೋಷಿತರ ವಿಮೋಚನಗಾಗಿ ಅಂಬೇಡ್ಕರ್ ಅವರು ಜೀವನದಲ್ಲಿ ತ್ಯಾಗ, ಬಲಿದಾನ ಮಾಡಿದ್ದಾರೆ. ಬಾಲ್ಯದಲ್ಲಿಯೇ ಸಾಕಷ್ಟು ಸಾಮಾಜಿಕ ಅವಮಾನ ಅನುಭವಿಸಿದರು. ಈ ನೋವಿನ ಅನುಭವಗಳೇ ಶೋಷಿತರ ವಿಮೋಚನೆಗೆ ನಾಂದಿಯಾಯಿತು. ಈ ಕಾರಣಕ್ಕಾಗಿ ಗ್ರಾಮೀಣ ಭಾಗದ ಯುವಕ, ಯುವತಿಯರು ಉನ್ನತ ವಿದ್ಯಾಭ್ಯಾಸ ಪಡೆಯಬೇಕು ಎಂದು ತಿಳಿಸಿದರು.

ಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್. ರೇಣುಕಸ್ವಾಮಿ ಮಾತನಾಡಿ, ಶೋಷಿತರು, ಕಾರ್ಮಿಕರ ಮತ್ತು ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರ ಶ್ರೇಯೋಭಿವೃದ್ಧಿಗೆ ಸಂವಿಧಾನ ಒತ್ತು ನೀಡಿದ್ದಾರೆ.

ಬೈಲುಕುಪ್ಪೆ ಪೊಲೀಸ್ ಠಾಣಾಧಿಕಾರಿ ರವಿಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಯುವಕರು ಯಾವುದೇ ಕಾರಣಕ್ಕೂ ಮಾದಕ ವಸ್ತುಗೆ ಬಲಿಯಾಗದೆ ಓದಿನ ಕಡೆ ಗಮನ ಹರಿಸಿ ಅವರ ಆದರ್ಶನವನ್ನು ಪಾಲಿಸಿ ಎಂದು ಕರೆ ನೀಡಿದರು.

ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀತಾ ಬಸಪ್ಪ, ಸದಸ್ಯರಾದ ಶೀಲಾ, ರಾಜಪ್ಪ, ಗ್ರಾಮದ ಮುಖಂಡರಾದ ಸುರೇಶ್, ನಂದೀಶ್, ರಾಮು, ಸಿದ್ದಲಿಂಗಯ್ಯ, ಆನಂದ್, ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಕ್ಷ ವಿನಯ್ ಕುಮಾರ್, ಕಾರ್ಯದರ್ಶಿ ಕಿರಣ್, ಸದಸ್ಯರಾದ ಸಂಜಯ್, ಪ್ರಶಾಂತ್, ರವೀಶ್ ನಿತ್ಯಾನಂದ, ಸುನಿಲ್, ಅವಿನಾಶ್, ಅಭಿಜಿತ್, ಗಣೇಶ್, ಸಂತೋಷ್, ಅಜಯ್, ವಿಜಯ್, ಪೃಥ್ವಿ, ಕಾರ್ತಿಕ, ರಾಜು, ರಾಕೇಶ್, ಗೌತಮ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net