

ಶ್ರೀ ಕೃಷ್ಣ ದೇವರಾಯ ವೇದಿಕೆ, ಆನೆಗೊಂದಿ
ನಾಡಿನ ಐತಿಹಾಸಿಕ ಸ್ಮಾರಕಗಳಿಗೆ ಕಾಯಕಲ್ಪ ನೀಡುವುದು ನಮ್ಮ ಸರ್ಕಾರದ ಧ್ಯೇಯ. ಕಲ್ಯಾಣ ಕರ್ನಾಟಕ ಭಾಗದ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಸಿಎಂಗೆ ಒತ್ತಾಯಿಸಲಾಗುವುದು ಎಂದುದು ಡಿಸಿಎಂ ಲಕ್ಷ್ಮಣ ಸವದಿ ಭರವಸೆ ನೀಡಿದರು.
ಆನೆಗೊಂದಿ ಉತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಬೇರೆ ದೇಶಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡುತ್ತಾರೆ. ಅದೇ ರೀತಿ ಸಚಿವ ಸಿ.ಟಿ.ರವಿಯವರು ನಾಡಿನ ಐತಿಹಾಸಿಕ ಸ್ಥಳಗಳಿಗೆ ಕಾಯಕಲ್ಪ ಕೊಡುವ ಕೆಲಸ ಮಾಡುತ್ತಿದ್ದಾರೆ. ಅದು ನಮ್ಮ ಸರ್ಕಾರದ ಜವಾಬ್ದಾರಿ. ಮುಂದಿನ ಮೂರು ವರ್ಷ ದೇಶಾದ್ಯಂತ ಇರುವ ಪ್ರವಾಸಿಗರನ್ನು ಈ ಭಾಗದತ್ತ ಸೆಳೆಯುವಂತಾಗಲಿ. ಇಂದಿನ ಪೀಳಿಗೆ ಇತಿಹಾಸ ಮರೆಯಬಾರದು. ಕೆಲವರು ಇತಿಹಾಸ, ಪರಂಪರೆ ಹಾಳು ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಅಲ್ಲದೇ ಸಾರ್ವಜನಿಕರು ಪಾಠ ಕಲಿಸಬೇಕು ಎಂದರು.
ಸಚಿವ ಸಿ.ಟಿ.ರವಿ ಮಾತನಾಡಿ, ನೇಪಾಳದಿಂದ ಶ್ರೀಲಂಕಾವರೆಗೆ ರಾಮಯಣದ ಕುರುಹುಗಳಿರುವ ಸ್ಥಳಗಳನ್ನು ಸಂಪರ್ಕಿಸಲು ಕೇಂದ್ರ ಸರ್ಕಾರ ರಾಮಾಯಣ ಸರ್ಕಿಟ್ ರಚಿಸಲಾಗುತ್ತಿದೆ. ಸ್ವಹಿತಾಸಕ್ತಿಗಿಂತ ರಾಷ್ಟ್ರೀಯ ಹಿತಾಸಕ್ತಿ ಮುಖ್ಯ. ಹಿಂದಿನ ಅನೇಕ ರಾಜ ಮನೆತನಗಳು ಸಾಮ್ರಾಜ್ಯ ನಿಷ್ಠೆಯುಳ್ಳವರು ಇರುವರೆಗೆ ಉಳಿದಿದ್ದವು. ಸ್ವಾರ್ಥ, ವ್ಯಕ್ತಿ ನಿಷ್ಠೆ ಮೇಲುಗೈ ಸಾಧಿಸಿದಾಗ ಪತನವಾದವು. ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರದ ಹಿತಾಸಕ್ತಿಗಿಂತ ವ್ಯಕ್ತಿ ನಿಷ್ಠೆ ಮುನ್ನೆಲೆಗೆ ಬಂದಿದೆ. ಹೀಗಾಗಿ ಎಲ್ಲೆಡೆ ಅಶಾಂತಿ ತಲೆದೋರಿದೆ. ನಮ್ಮ ಪೂರ್ವಿಕರ ಇತಿಹಾಸ ಮರೆಯಬಾರದು. ಅದೇ ಉದ್ದೇಶಕ್ಕಾಗಿ ಉತ್ಸವ ಹಮ್ಮಿಕೊಂಡಿದ್ದೇವೆ. ರಾಜ್ಯದ ಪಾರಂಪರಿಕ ವೈಭವವನ್ನು ಮೈಸೂರು ಮಾತ್ರವಲ್ಲದೇ ಹಂಪಿ, ಆನೆಗೊಂದಿ ಉತ್ಸವಗಳು ತೋರಿಸಬೇಕು. ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಉತ್ತೇಜಿಸಬೇಕು. ಪ್ರವಾಸಿಗರನ್ನು ಅತಿಥಿ ದೇವೋಭವ ಎಂದು ನಡೆದುಕೊಳ್ಳಬೇಕು. ನಮ್ಮ ಕಲೆ, ಸಂಸ್ಕೃತಿ ಉಳಿಸಲು ನಾವೇನು ಮಾಡಿಲ್ಲ. ಇರೋದನನ್ನು ಉಳಿಸಿಕೊಳ್ಳಬೇಕು. ಆ ಸ್ವಾಭಿಮಾನದ ಯೋಚನೆ ನಮ್ಮಲ್ಲಿ ಬರಬೇಕು. ಪರಂಪರೆ ರಕ್ಷಣೆ ದೀಕ್ಷೆಯನ್ನು ಎಲ್ಲರೂ ತೊಡೋಣ ಎಂದರು.
ಶಾಸಕ ಪರಣ್ಣ ಮುನವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ ಸಿ ಪಿ.ಸುನಿಲ್ ಕುಮಾರ್ ಸ್ವಾಗತಿಸಿದರು. ಸಚಿವ ಸವದಿ ಹಾಗೂ ಸಚಿವ ಸಿ.ಟಿ.ರವಿಗೆ ವಿಶೇಷ ಪೂಜೆ ಸಲ್ಲಿಸಿದ ಬೆಳ್ಳಿ ಆಂಜನೇಯ ಮೂರ್ತಿ ನೀಡಿ ಗೌರವ ಅರ್ಪಿಸಲಾಯಿತು. ರಾಜಮಾತೆ ಚಂದ್ರಕಾಂತಾದೇವಿ, ರಾಜ ಶ್ರೀಕೃಷ್ಣ್ಣದೇವರಾಯರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಭವ್ಯ ಪರಂಪರೆ ತಾಣ ಆನೆಗೊಂದಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಔಷಧ ಸಸ್ಯಗಳ ಮಾಹಿತಿಯುಳ್ಳ ಕಿಷ್ಕಿಂಧ ಕಾಂಡ ಪುಸ್ತಕ ಬಿಡುಗಡೆಯಾಯಿತು.
ಹಾಲಪ್ಪ ಆಚಾರ್, ಬಸವರಾಜ ದಡೇಸುಗೂರು, ಶಾಸಕರಾದ ಅಮರೇಗೌಡ ಬಯ್ಯಪುರ, ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ, ಸದಸ್ಯೆ ಅನಿತಾ ಮಾರುತಿ, ತಾಪಮ ಅಧ್ಯಕ್ಷ ಮಲ್ಲಿಕಾಜುನಗೌಡ, ಆನೆಗೊಂದಿ ಂತಾಪಂ ಸದಸ್ಯ ರಮೇಶ ಸಣಾಪುರ, ಪ್ರಾವಾಸೋದ್ಯಮ ಇಲಾಖೆ ಕಾರ್ಯದರ್ಶೀ ಟಿ.ಕೆ.ಅನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ, ಎಡಿಸಿ ಎಂ.ಪಿ.ಮಾರುತಿ, ಡಿಎಫ್‌ಒ ಯಶಪಾಲ್ ಕ್ಷೀರಸಾಗರ, ಎಸಿ ಸಿ.ಡಿ.ಗೀತಾ, ಎಸ್ಪಿ ಜಿ.ಸಂಗೀತಾ ಇತರರಿದ್ದರು.
ವೈಭವದ ಮೆರವಣಿಗೆಯಲ್ಲಿ ವಿದೇಶಿಗರ ಕುಣಿತ
ಗಂಗಾವತಿ: ಐದು ವರ್ಷಗಳ ನಂತರ ನಡೆಯುತ್ತಿರುವ ಆನೆಗೊಂದಿ ಉತ್ಸವ ನಿಮಿತ್ತ ಗುರುವಾರ ಬೆಳಗ್ಗೆ ವೈಭವದ ಮೆರವಣಿಗೆ ನಡೆದಿಯಿತು. ಇಡೀ ಗ್ರಾಮ ತಳಿರು ತೋರಣಗಳಿಂದ ಶೃಂಗಾರಗೊಂಡಿದ್ದು, ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದಿಂದ ಶ್ರೀರಂಗನಾಥ ದೇವಾಲಯದವರೆಗೆ ನಡೆಯಿತು. ಶಾಸಕ ಪರಣ್ಣ ಮುನವಳ್ಳಿ, ಜಿಪಂ ಅಧ್ಯಕ್ಷ ವಿಶ್ವನಾಥರೆಡ್ಡಿ ಹೊಸ್ಮನಿ ಸಾರೋಟದಲ್ಲಿದ್ದ ಆದಿಶಕ್ತಿ ವಿಗ್ರಹ ಮತ್ತು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಎಸಿ ಸಿ.ಡಿ.ಗೀತಾ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪೊ.ಪಾ., ತಹಸೀಲ್ದಾರ್ ಎಲ್. ಡಿ.ಚಂದ್ರಕಾಂತ, ಕವಿತಾ, ರಾಜ ವಂಶಸ್ಥರಾದ ಲಲಿತಾರಾಣಿರಾಯಲು, ರಾಜಾ ಕೃಷ್ಣದೇವರಾಯ ಇತರರು ಇದ್ದರು. ಧಾರವಾಡದ ಜಗ್ಗಲಿ ಮೇಳ, ಹಾಸನದ ಗೊಂಬೆ ಮೇಳ, ಕೂಡ್ಲಿಗಿ ಮತ್ತ ಮಲಪನಗುಡಿಯ ಡೊಳ್ಳು ಕುಣಿತ, ವೀರಗಾಸೆ, ಪುರವಂತಿಕೆ, ಮರಗಾಲು ಕುಣಿತ, ನಂದಿಕೋಲು ಕುಣಿತ, ಸಿದ್ದಾಪುರ ಹಗಲುವೇಷಗಾರರು, ಲಂಬಾಣಿ ನೃತ್ಯ, ಆನೆಗೊಂದಿಯ ಕೋಲಾಟ, ಕಿನ್ನಾಳದ ಕರಡಿ ಮಜಲು, ಹಲಗೆವಾದನ, ವಿಶ್ವಕರ್ಮರ ಸಮಾಳ ವಾದ್ಯ, ಕಹಳೆ ವಾದನ, ತಮಟೆ, ನಗಾರಿ ಮೇಳ, ಸೋಮನ ಕುಣಿತ ಸೇರಿ 40ಕ್ಕೂ ಹೆಚ್ಚು ಕಲಾ ತಂಡ ಪಾಲ್ಗೊಂಡಿದ್ದವು. ಕಲಾವಿದರ ಜತೆ ಅಧಿಕಾರಿಗಳು, ವಿದೇಶಿಗರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಮಾನವೀಯತೆ ಇರುವವರು ಪೌರತ್ವ ವಿರೋಧಿಸಲ್ಲ ಎಂದ ಸಚಿವ ಸಿ.ಟಿ.ರವಿ
ಕೊಪ್ಪಳ: ಮಾನವೀಯತೆ ಇರುವವರು ಪೌರತ್ವ ಕಾಯ್ದೆ ವಿರೋಧಿಸುವುದಿಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದರು. ಕಾಂಗ್ರೆಸ್‌ನವರು ಇತಹಾಸ ಗೊತ್ತಿಲ್ಲದೆ ಮಾತನಾಡುತ್ತಿದ್ದಾರೆ. ಇತಿಹಾಸ ಗೊತ್ತಿದ್ದರೆ ಯಾಕೆ ಕಾಯ್ದೆ ವಿರೋಧಿಸುವಿರಿ? ಮೂರು ದೇಶದ 6 ಸಮುದಾಯದವರಿಗಾಗಿ ಪೌರತ್ವ ಕಾಯ್ದೆ ಮಾಡಲಾಗಿದೆ. ಇದು ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ. ದೇಶ ವಿಭಜನೆ ಮಾಡಿದವರು ಕಾಂಗ್ರೆಸ್‌ನವರು ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಿಳಿಸಿದರು. ಶಾಸಕ ಅಮರೇಗೌಡ ಬಯ್ಯಪುರ ಇವಿಎಂ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಕ್ಕೆ ಪ್ರತಿಕ್ರಿಯಿಸಿ, ಅವರು ಗೆದ್ದಿರುವುದು ಇವಿಎಂನಿಂದಲೇ. ಕೆಲವೆಡೆ ನಾವು ಸೋತಿದ್ದನ್ನು ಸ್ವೀಕರಿಸಿದ್ದೇವೆ. ಕಾಂಗ್ರೆಸ್‌ನವರಿಗೆ ಸರ್ಜಿಕಲ್ ಸ್ಟ್ರೈಕ್, ಇವಿಎಂ ಸೇರಿ ಎಲ್ಲದರ ಮೇಲೂ ಅನುಮಾನ ಶುರುವಾಗಿದೆ. ಸದ್ಯ ಹೆಂಡತಿ, ತಾಯಿ ಬಗ್ಗೆ ಅನುಮಾನ ವ್ಯಕ್ತಪಡಿಸುವ ಕಾಯಿಲೆ ಬಾರದಿರಲಿ ಎಂದು ಟಾಂಗ್ ನೀಡಿದರು.
ಬಿಜೆಪಿಗರು ಬಹಿರಂಗ ಚರ್ಚೆಗೆ ಬರಲಿ
ನಮಗೆ ಇವಿಎಂ ಮೇಲೆ ಈಗಲೂ ಅನುಮಾನವಿದೆ. ಬಿಜೆಪಿಯವರು ಈ ಬಗ್ಗೆ ಚರ್ಚಿಸಿ, ಸರ್ವರೂ ಒಪ್ಪುವ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಬೇಕು ಎಂದು ಶಾಸಕ ಅಮರೇಗೌಡ ಬಯ್ಯಪುರ ಒತ್ತಾಯಿಸಿದರು. ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಿ.ಟಿ.ರವಿ ಬುದ್ಧಿವಂತರು. ಅವರು ಮಾತನ್ನಾಡುವ ಬದಲು ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಚರ್ಚೆ ಮಾಡಲಿ. ಮುಂದುವರಿದ ದೇಶಗಳೇ ಬ್ಯಾಲೆಟ್ ಪೇಪರ್ ಬಳಸುತ್ತಿವೆ. ನಮ್ಮಲ್ಲಿ ಯಾಕೆ ಇವಿಎಂ ಬೇಕು? ಮತ್ತೆ ಬ್ಯಾಲೇಟ್ ಪೇಪರ್ ಮೂಲಕ ಚುನಾವಣೆ ನಡೆಸಲಿ. ಅನೇಕ ತಂತ್ರಜ್ಞರು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜನರಿಗೆ ಅನುಮಾನ ಬಾರದಿರಲಿ ಎಂದು ಬೇಕೆಂದೇ ಬಿಜೆಪಿ ಸೋತಿದೆ. ಅವರು ಅಭಿವೃದ್ಧಿ ಬಿಟ್ಟು ಜನರ ಭಾವನೆಯನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಪೌರತ್ವ ಕಾಯ್ದೆ ಹೊಸದಲ್ಲ. ಆದರೂ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜಾರಿಮಾಡಿ ಗೊಂದಲ ಮೂಡಿಸಿದ್ದಾರೆ ಎಂದು ಆರೋಪಿಸಿದರು.
40 ಪ್ರದರ್ಶನ ಮತ್ತು ಮಾರಾಟ ಮಳಿಗೆ
ಮುಖ್ಯವೇದಿಕೆ ಎಡಭಾಗದಲ್ಲಿ 40 ಪ್ರದರ್ಶನ ಮತ್ತು ಮಾರಾಟ ಮಳಿಗೆ ಹಾಕಿದ್ದು, ವಾರ್ತಾ ಇಲಾಖೆ ಪ್ರಸ್ತು ತಪಡಿಸಿದ ಸರ್ಕಾರದ ಸಾಧನೆ ಮಳಿಗೆ ಅದ್ದೂರಿತನದಿಂದ ಕೂಡಿತ್ತು. ೆಟೋ ಜರ್ನಲಿಸ್ಟ್‌ಗಳ ೆಟೋಗ್ರಾಫಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ಚಿತ್ರಕಲೆ ಶಿಕ್ಷಕರ ಕಲಾಕೃತಿಗಳು, ಆರೋಗ್ಯ, ಕೃಷಿ, ಅರಣ್ಯ, ಸಿಡಿಪಿಒ, ಶಿಕ್ಷಣ ಇಲಾಖೆಯ ನಮ್ಮ ಶಾಲೆ, ನಮ್ಮ ಹೆಮ್ಮೆ ಪರಿಕಲ್ಪನೆಯ ರೂಪಕ ಮತ್ತು ಯೋಜನೆ, ಸಾಧನೆಗಳು ಮತ್ತು ಸ್ವಯ ಸಹಾಯ ಗುಂಪುಗಳ ಗೃಹ ಕೈಗಾರಿಕೆ ವಸ್ತುಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಹೊರ ಜಿಲ್ಲೆಗಳ ಸ್ವಸಹಾಗುಂಪಿನ ಗೃಹ ಕೈಗಾರಿಕೆ ವಸ್ತುಗಳ ಮಾರಾಟಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಾಸ್ಟ್ ುಡ್‌ಗಳಿಗೂ ಅವಕಾಶ ನೀಡಿದ್ದು, ಮಿರ್ಚಿಭಜಿ, ವಗ್ಗರಣಿ, ಲಾವ್ ಭರ್ಜರಿ ವ್ಯವಹಾರವಾಯಿತು.
ಗಮನಸೆಳೆದ ಫಲಪುಷ್ಪ ಪ್ರದರ್ಶನ
ಗಗನಮಹಲ್ ಮುಂಭಾಗದಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಗಮನಸೆಳೆದಿದ್ದು, ವೈವಿದ್ಯಮಯ ಹಣ್ಣು, ಹೂವು ಮತ್ತು ಸಸಿಗಳ ಪ್ರದರ್ಶನ ನಡೆಯುತ್ತಿದೆ. ಜವಾರಿ ಮತ್ತು ಹೈಬ್ರೀಡ್ ತಳಿಗಳ ಹಣ್ಣು, ಕಾಯಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಹೂವಿನಿಂದ ರೂಪಿಸಿದ ವಾಲಿಕಿಲ್ಲಾ ಮ್ಯಾಗೋಟದ ಕೋಟೆ, ವೀಣೆ ಮತ್ತು ತಬಲಾ ಅಕರ್ಷಕವಾಗಿವೆ. ಕಲ್ಲಂಗಡಿಯಲ್ಲಿ ಮದಕರಿ ನಾಯಕ, ಚಾಣಕ್ಯ, ಸಿದ್ದಗಂಗಾ ಶ್ರೀ, ಪೇಜಾವರಶ್ರೀ, ಶ್ರೀಕೃಷ್ಣದೇವರಾಯ ಸೇರಿ ದಾರ್ಶನಿಕರು ಮತ್ತು ಅರಸರ ಕೆತ್ತನೆ ಮನಸೂರೆಗೊಂಡಿತ್ತು. ಸಸ್ಯಕಾಶಿಯಲ್ಲಿ ಪೇಜಾವರಶ್ರೀ ಪರಿಕಲ್ಪನೆ ಮೆಚ್ಚುಗೆ ವ್ಯಕ್ತವಾಯಿತು. ಕೃತಕ ಜಲಪಾತ ಜೀವಜಲ ಮತ್ತು ಪರಿಸರ ರಕ್ಷಿಸಿ ಸಂದೇಶ ನೀಡಿತು. ತೋಟಗಾರಿಕೆ ಸಿಬ್ಬಂದಿ ಮತ್ತ ಕಲಿಕಾರ್ಥಿಗಳು ರೂಪಿಸಿದ ಲಪುಷ್ಪ ಪ್ರದರ್ಶನ ಮನಸೂರೆಗೊಂಡಿತು.
ಪ್ರೇಕ್ಷಕರಿಗೆ ಧೈರ್ಯ ತುಂಬಿದ ಅಡ್ವೆಂಚರ್ ಇವೆಂಟ್ಸ್...
ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಖ್ಯವೇದಿಕೆ ಸನಿಹದಲ್ಲಿ ಭೂಸಾಹಸ ಮತ್ತು ಸಣಾಪುರ ಜಲಾಶಯದಲ್ಲಿ ಜಲ ಸಾಹಸ ಕ್ರೀಡೆಗಳು ನಡೆದವು. ನೋಪಾಸಣೆ ನಿರ್ವ ಹಣೆಯಲ್ಲಿ ಭೂ ಸಾಹನ ಕ್ರೀಡೆಯಲ್ಲಿ ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್, ಲ್ಯಾಡರ್ ಕ್ಲೈಂಬಿಂಗ್,ಝೀಪ್‌ಲೈನ್, ಅಬ್‌ಸ್ಟ್ರಾಕಲ್ಸ್, ರ‌್ಯಾಪಲಿಂಗ್, ಸ್ಪೋರ್ಟ್ಸ್ ಕ್ಲೈಂಬಿಂಗ್, ರೋಪ್ ಕ್ಲೈಂಬಿಂಗ್ ಆಯೋಜಿಸಿದ್ದು, ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದವು. ಜಲಸಾಹಸ ಕ್ರೀಡೆಗಳಲ್ಲಿ ಬೋಟಿಂಗ್, ಕೆಯಾಕಿಂಗ್, ವಾಟರ್ ಸರ್ಫಿಂಗ್, ರೋಯಿಂಗ್, ಕೆನೋಯಿಂಗ್, ಮೋಟಾರ್ ಬೋಟ್ ರೈಡ್, ಬನಾನ್ ರೈಡ್, ವಾಟರ್ ಸ್ಕೂಟರ್ ಗಮನ ಸೆಳೆದವು. ಅರ್ಚರಿ ಮತ್ತು ಟಾರ್ಗೆಟ್ ಶೂಟಿಂಗ್ ಮುದ ನೀಡಿದವು. ಆನೆಗೊಂದಿ ಬೈಸ್ಕೈಗೆ ನೀರಸ ಪ್ರತಿಕ್ರಿಯೆ ವ್ಯಕ್ತ ವಾಗಿದ್ದು, ನಿರೀಕ್ಷಿಸಿದಷ್ಟು ಆಸಕ್ತರು ಕಾಪ್ಟರ್‌ನತ್ತ ಬರಲಿಲ್ಲ.