

ಉಳ್ಳಾಲ: ಶಿಕ್ಷಣ ಎನ್ನುವುದು ವಿದ್ಯಾರ್ಥಿಯ ಅಂತರಂಗದ ಪ್ರತಿಭೆಯ ಅನಾವರಣಕ್ಕೆ ಸಂಬಂಧಿಸಿದ್ದೇ ಹೊರತು ಹೊರಗಿನಿಂದ ಹೇರಲ್ಪಡುವುದಲ್ಲ. ಪ್ರಾಯೋಗಿಕ ಚಟುವಟಿಕೆಗಳ ಮೂಲಕ ನೀಡುವ ಶಿಕ್ಷಣದಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ ಎಂಬುದು ಕಾರಂತರ ನಂಬಿಕೆಯಾಗಿತ್ತು. ಪುತ್ತೂರಿನ ಬಾಲವನದಲ್ಲಿ ಇದನ್ನು ಅವರು ಪ್ರಾಯೋಗಿಕವಾಗಿ ಅಳವಡಿಸಿದ್ದರು ಎಂದು ಮಂಗಳೂರು ವಿ.ವಿ. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಸೋಮಣ್ಣ ಹೇಳಿದರು.
ಮಂಗಳೂರು ವಿ.ವಿ. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಇತ್ತೀಚೆಗೆ ನಡೆದ ಶಿವರಾಮ ಕಾರಂತ ನೆನಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಾತನಾಡಿದರು.
ಡಾ.ಧನಂಜಯ ಕುಂಬ್ಳೆ ವಾತನಾಡಿ, ಪ್ರಯೋಗಶೀಲ ವ್ಯಕ್ತಿತ್ವದ ಕಾರಂತರ ವೈಚಾರಿಕತೆ ಮಹತ್ವದ್ದು. ಬಾಳ್ವೆಯೇ ಬೆಳಕು ಎಂದು ನಂಬಿದ್ದ ಅವರು ಸವಾಜ ವಿರೋಧಿ ಕಾರ್ಯಗಳು ನಡೆದಾಗ ಪ್ರತಿಭಟಿಸುತ್ತಿದ್ದರು. ಕೈಗಾ ಅಣುಸ್ಥಾವರ ವಿರೋಧಿ ಚಳವಳಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪದ್ಮಭೂಷಣ ಮರಳಿಸಿದ್ದು, ಮೊದಲಾದವು ಇದಕ್ಕೆ ಉದಾಹರಣೆ ಎಂದರು.
ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ ಸ್ವಾತಿ ವಾತನಾಡಿದರು. ಸೌಮ್ಯಾ ಸ್ವಾಗತಿಸಿದರು. ಪ್ರತೀಕ್ಷಾ ವಂದಿಸಿದರು. ಸಂಧ್ಯಾ ಎನ್. ನಿರೂಪಿಸಿದರು.
ಕಾರಂತರಿಗೆ ಬಹುಕ್ಷೇತ್ರಗಳಲ್ಲಿ ಆಸಕ್ತಿಯಿತ್ತು. ಕಾದಂಬರಿಯಿಂದ ಫೋಟೋಗ್ರಫಿವರೆಗೆ ಹತ್ತಾರು ಕ್ಷೇತ್ರಗಳಲ್ಲಿ ಅವರು ತೊಡಗಿಕೊಂಡಿದ್ದರು. ಕನ್ನಡದ ಮಹತ್ವದ ಇನ್ನೋರ್ವ ಸಾಹಿತಿ ತೇಜಸ್ವಿಯವರಿಗೆ ಕಾರಂತರು ಪ್ರೇರಣೆಯಾಗಿದ್ದರು. ಪ್ರೊ.ಸೋಮಣ್ಣ, ಮಂಗಳೂರು ವಿ.ವಿ. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ