

ಕುಶಾಲನಗರ : ಪ್ರಾಚೀನ ಕಾಲದಿಂದ ಬಂದ ವಿಶ್ವಕರ್ಮ ಪರಂಪರೆ ಮತ್ತು ಕಲಾ ಸಂಸ್ಕೃತಿ ಉಳಿಸುವತ್ತ ಚಿಂತನೆ ನಡೆಸಬೇಕು ಎಂದು ಹಿರಿಯ ಶಿಲ್ಪಿ ಮಂಜುನಾಥ ಆಚಾರ್ಯ ಹೇಳಿದರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ ಹೆಬ್ಬಾಲೆ ಕಾಳಿಕಾಂಬ ದೇವಾಲಯದೇವಾಲಯದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಿ. ಪುಟ್ಟಮ್ಮ ಮತ್ತು ಹೆಬ್ಬಾಲೆ ದಿ.ನಂಜಾಚಾರ್ದ ತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ’ ವಿಷಯ ಕುರಿತು ಅವರು ಮಾತನಾಡಿದರು. ಚಿತ್ರಕಲೆ ಮತ್ತು ಶಿಲ್ಪಕಲೆ ಸೇರಿದಂತೆ ಹಲವು ಕರಕುಶಲ ಕಲೆಗಾರಿಕೆಯನ್ನು ವಿಶ್ವಕರ್ಮ ಸಮಾಜ ಕೊಡುಗೆಯಾಗಿ ನೀಡಿದೆ. ಕಲಾ ಸಂಸ್ಕೃತಿ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಲು ಪೂರಕವಾದ ಸೇವಾ ಕಾರ್ಯಗಳನ್ನು ಮಾಡಿದೆ. ವಿಶ್ವಕರ್ಮ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ವಿಶ್ವದ ಹತ್ತು ಹಲವು ಸಮುದಾಯಗಳಿಗೆ ನಾಗರಿಕತೆ, ಸಂಸ್ಕಾರ, ಸಂಸ್ಕೃತಿ ಕಲಿಸಿಕೊಟ್ಟವರೇ ವಿಶ್ವಕರ್ಮರು. ವಿಶ್ವಕರ್ಮ ಸಮುದಾಯದ ಬಹುತೇಕ ಜನರು ಕುಶಲಕರ್ಮಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಗುರುತಿಸುವ ಕಾರ್ಯ ಆಗಬೇಕಿದೆ ಎಂದರು.
ಪ್ರತಿಯಿಂದು ಸಮುದಾಯದವರ ವೃತ್ತಿ ಮತ್ತು ಆಚರಣೆಗಳು ಇತರ ಸಮುದಾಯಗಳಿಗೆ ಪ್ರೇರಕ ಮತ್ತು ಪೂರಕವಾಗಿರುತ್ತವೆ. ಕೃಷಿ ಚಟುವಟಿಕೆಗಳು ರೈತರ ಬೆನ್ನೆಲುಬಾದರೆ ಕೃಷಿಕರಿಗೆ ವಿಶ್ವಕರ್ಮ ಸಮುದಾಯದ ಕುಲ ಕಸುಬುಗಳು ಪ್ರಮುಖ ಆಧಾರವಾಗಿ ನಿಲ್ಲುತ್ತವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಕುಮಾರಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ ಎಂದರು.
ಜಿಲ್ಲಾ ಕಸಾಪ ನಿರ್ದೇಶಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ನಿವೃತ್ತ ಪ್ರಾಂಶುಪಾಲ ನಾಗಾಚಾರಿ, ಹೆಬ್ಬಾಲೆ ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್, ನಿವೃತ್ತ ಪ್ರಾಂಶುಪಾಲ ಎಚ್.ಬಿ. ಲಿಂಗಮೂರ್ತಿ ಮಾತನಾಡಿದರು.