ಸಂಸ್ಮರಣ ದತ್ತಿ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ವಿದ್ಯಾವರ್ಧಕ ಸಂಘವು ಜ. 28ರಂದು ಸಂಜೆ 5.15ಕ್ಕೆ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ಡಾ. ಎಸ್​.ಎಂ. ವೃಷಭೇಂದ್ರಸ್ವಾಮಿ ಸಂಸ್ಮರಣ ದತ್ತಿ ಕಾರ್ಯಕ್ರಮ ಏರ್ಪಡಿಸಿದೆ.

ವಿಶ್ರಾಂತ ಪ್ರಾಧ್ಯಾಪಕ ಡಾ. ಜಿ. ಎಂ. ಹೆಗಡೆ ಅವರು ಕನ್ನಡ ಸಾಹಿತ್ಯದಲ್ಲಿ ಅಲ್ಲಮ ಪ್ರಭುದೇವ ವಿಷಯ ಕುರಿತು ಉಪನ್ಯಾಸ ನೀಡುವರು. ಭಾರತೀಯ ತಂತ್ರಜ್ಞಾನ ಸಂಸ್ಥೆ ಪ್ರಾಧ್ಯಾಪಕ ಡಾ. ಎಸ್​.ಎಂ. ಶಿವಪ್ರಸಾದ ಉಪಸ್ಥಿತರಿರುವರು. ಡಾ. ಸಿ. ಆರ್​. ಯರವಿನತೆಲಿಮಠ ಅಧ್ಯಕ್ಷತೆ ವಹಿಸುವರು. ಶಿಲ್ಪಾ ನವಲಿಮಠ ಮತ್ತು ಜಯಂತಿ ಸಂಗಡಿಗರು ವಚನ ಗಾಯನ ಪ್ರಸ್ತುತಪಡಿಸುವರು ಎಂದು ಶಂಕರ ಹಲಗತ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net