

ತಿ.ನರಸೀಪುರ: ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವ ದಿನವೇ ಸ್ವಾತಂತ್ರ್ಯ ದಿನಾಚರಣೆ ಎಂದು ಜಿ.ಪಂ. ತಾಂತ್ರಿಕ ಉಪ ವಿಭಾಗದ ಎಇಇ ಪಿ.ಎನ್.ಚರಿತಾ ತಿಳಿಸಿದರು.
ಪಟ್ಟಣದ ಲಿಂಕ್ ರಸ್ತೆಯಲ್ಲಿರುವ ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪ ವಿಭಾಗದ ಕಚೇರಿ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ದೇಶಕ್ಕಾಗಿ ಪ್ರಾಣ ಕೊಟ್ಟ ಮಹನೀಯರನ್ನು ಇದೊಂದು ದಿನ ಸ್ಮರಿಸದರೆ ಸಾಲದು. ನಿರಂತರವಾಗಿ ಅವರ ತ್ಯಾಗ ಬಲಿದಾನವನ್ನು ಸ್ಮರಿಸುತ್ತಾ, ಅವರ ಆದರ್ಶ, ಚಿಂತನೆಗಳನ್ನು ಮೈಗೂಡಿಸಿಕೊಂಡು ದೇಶಪ್ರೇಮಿಗಳಾಗಬೇಕೆಂದು ಕರೆ ನೀಡಿದರು.
ಸಹಾಯಕ ಇಂಜಿನಿಯರ್‌ಗಳಾದ ಶಿವಸ್ವಾಮಿ, ದೇವರಾಜು, ಕಚೇರಿ ವ್ಯವಸ್ಥಾಪಕ ನಾಗರಾಜು, ಸಿಬ್ಬಂದಿ ಕೃಷ್ಣಮೂರ್ತಿ, ಚಂದ್ರಕಲಾ, ಮಹೇಶ್, ನಾಗರಾಜು, ನಾರಾಯಣ, ಮನು, ವೇಣು, ಪ್ರಿಯಾ, ನಾರಾಯಣ, ಮಹೇಶ ಹಾಗೂ ಇತರರಿದ್ದರು.