ತಾಳೆ ಬೆಳೆಗೆ ಬೆಂಬಲ ಬೆಲೆ ನೀಡಲು ಒತ್ತಾಯ

10SGN01
Published on

ಬಂಕಾಪುರ: ತಾಳೆ ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತೋಟಗಾರಿಕೆ, ರೇಷ್ಮೆ ಹಾಗೂ ಪೌರಾಡಳಿತ ಸಚಿವ ನಾರಾಯಣಗೌಡ ಅವರಿಗೆ ಉತ್ತರ ಕರ್ನಾಟಕ ನವಕಲ್ಪ ತಾಳೆ ಬೆಳೆಗಾರರ ಸಂಘದ ವತಿಯಿಂದ ಹಾವೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ತಾಳೆ ಬೆಳೆಗಾರರಿದ್ದು, ತಾಳೆ ಬೆಳೆಗೆ ಬೆಂಬಲ ಬೆಲೆ (ಎಂಎಸ್​ಪಿ) ನೀಡಬೇಕು. ಈಗಾಗಲೇ ಸರ್ಕಾರದಿಂದ ಸಹಾಯಧನ ನೀಡುತ್ತಿದ್ದು, ಅದನ್ನು ಪ್ರತಿ ಟನ್​ಗೆ 2500 ರೂ.ಗೆ ನಿಗದಿಪಡಿಸಬೇಕು. ತಾಳೆ ಬೆಳೆಯಲು ಖರ್ಚು ಹೆಚ್ಚಾಗಿರುವುದರಿಂದ ಬೆಂಬಲ ಬೆಲೆಯನ್ನು ಪ್ರತಿ ಟನ್​ಗೆ 1500 ರೂ. ನೀಡಬೇಕು. ಎತ್ತರದ ತಾಳೆಯ ಹಣ್ಣುಗಳನ್ನು ಕಟಾವು ಮಾಡಲು ರಿಯಾಯಿತಿ ದರದಲ್ಲಿ ಯಂತ್ರ ಒದಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಉತ್ತರ ಕರ್ನಾಟಕ ನವಕಲ್ಪ ತಾಳೆ ಬೆಳೆಗಾರರ ಸಂಘದ ಅಧ್ಯಕ್ಷ ಉಮೇಶ ಅಂಗಡಿ, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ, ಜಿ.ಪಂ. ಮಾಜಿ ಸದಸ್ಯ ಶಶಿಧರ ಹೊನ್ನಣ್ಣವರ, ಕಾಶಿನಾಥ ಕಳ್ಳಿಮನಿ, ಶ್ರೀನಿವಾಸ ಶಿವಪೂಜಿ, ಗಂಗಣ್ಣ ಮಾಸೂರ, ಕೃಷ್ಣಪ್ಪ ನಾಯಕ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net