ಬೆಳಗಾವಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆಗೆ ಒತ್ತಾಯ

IMG-20230704-WA0017.jpg
Published on

ಬೆಳಗಾವಿ : ಬೆಳಗಾವಿ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೊಷಿಸಿ, ಕೂಡಲೇ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಕಾರ್ಯ ಆರಂಭಿಸಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದ, ರೈತ ಸಂಘದ ಪದಾಧಿಕಾರಿಗಳು, ಈ ಬಾರಿಯ ಮುಂಗಾರು ಹಂಗಾಮು ಸಂಪೂರ್ಣ ವಿಫಲವಾಗಿದ್ದು, ವಾಡಿಕೆಯಂತೆ ಜೂನ್ ಕೊನೆ ಹಾಗೂ ಜುಲೈ ಮೊದಲ ವಾರ ಮುಗಿಯುತ್ತ ಬಂದರೂ ಇಡೀ ತಾಲೂಕಿನಲ್ಲಿ ಎಲ್ಲಿಯೂ ಬಿತ್ತನೆ ನಡೆದಿಲ್ಲ. ವಾಡಿಕೆಯಷ್ಟು ಮಳೆಯೂ ಆಗಿಲ್ಲ. ಸರಿಯಾಗಿ ವಿದ್ಯುತ್ ಸರಬಾರು ಆಗದ್ದರಿಂದ ನೀರಾವರಿಯ ಕಬ್ಬು ಸಹ ಒಣಗಿದೆ ಎಂದು ಅಳಲು ತೋಡಿಕೊಂಡರು.

ಜಿಲ್ಲಾಡಳಿತಕ್ಕೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ಬಸವರಾಜ ಡೊಂಗರಗಾವಿ, ಬಸವರಾಜ ಹಣ್ಣಿಕೇರಿ, ಶೇಖಯ್ಯ ಪರವಯ್ಯನವರ, ಮಹಾದೇವ ಅರಗಂಜಿ ಹಾಗೂ ಸುರೇಶ ಪಗಡಿ ಇದ್ದರು.
ಜಿಲ್ಲಾಡಳಿತಕ್ಕೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ಬಸವರಾಜ ಡೊಂಗರಗಾವಿ, ಬಸವರಾಜ ಹಣ್ಣಿಕೇರಿ, ಶೇಖಯ್ಯ ಪರವಯ್ಯನವರ, ಮಹಾದೇವ ಅರಗಂಜಿ ಹಾಗೂ ಸುರೇಶ ಪಗಡಿ ಇದ್ದರು.

ಈಗಾಗಲೇ ಮಳೆ ನೆಚ್ಚಿಕೊಂಡು ಬೀಜ-ಗೊಬ್ಬರ ಖರೀದಿಸಿದ್ದ ರೈತರು ಆರ್ಥಿಕ ಸಂಕಷ್ಟಕ್ಕೂ ಸಿಲುಕಿದ್ದು, ಕೂಡಲೇ ಬೆಳಗಾವಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ಪರಿಹಾರೋಪಾಯದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಬಸವರಾಜ ಡೊಂಗರಗಾವಿ, ಬಸವರಾಜ ಹಣ್ಣಿಕೇರಿ, ಶೇಖಯ್ಯ ಪರವಯ್ಯನವರ, ಮಹಾದೇವ ಅರಗಂಜಿ ಹಾಗೂ ಸುರೇಶ ಪಗಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net