

ಮಂಗಳೂರು : ಕರಾವಳಿ ಜಿಲ್ಲೆಗಳ ಶಾಲೆಗಳಲ್ಲಿ ಕೊಂಕಣಿ ಶಿಕ್ಷಣಕ್ಕೆ ಸವಲತ್ತುಗಳನ್ನು ಒದಗಿಸುವಂತೆ ಕೋರಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕರ ನೇತೃತ್ವದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರಿಗೆ ಸಲ್ಲಿಸಲಾಯಿತು.
ಕೊಂಕಣಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿ 15 ವರ್ಷಗಳಾಗಿದ್ದು ಸುಮಾರು 6000 ವಿದ್ಯಾರ್ಥಿಗಳು ಕೊಂಕಣಿ ಭಾಷೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ರಾಷ್ತ್ರೀಯ ಶಿಕ್ಷಣ ನೀತಿ ಶೀಘ್ರ ಜಾರಿಯಾಗುವುದರಿಂದ ಕೊಂಕಣಿ ಪಠ್ಯ ಪುಸ್ತಕಗಳ ಪರಿಷ್ಕರಣೆ, ಒಂದರಿಂದ ಐದನೇಯ ತರಗತಿಯ ತನಕ ಕೊಂಕಣಿ ಪಠ್ಯ ಪುಸ್ತಕಗಳ ರಚನೆ ಹಾಗೂ ಕೊಂಕಣಿ ಶಿಕ್ಷಕರಿಗೆ ಗೌರವಧನ ಮುಂತಾದ ಸವಲತ್ತುಗಳನ್ನು ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.