ಶಾಂತಿ, ಸೌಹಾರ್ದಕ್ಕೆ ಕುಂಬ್ರ ಜನತೆಯ ಸಹಕಾರ : ಎಸ್‌ಐ ಜಂಬೂರಾಜ್ ಮಹಾಜನ್ ಹರ್ಷ

New Project (3)
Published on

ಪುತ್ತೂರು ಗ್ರಾಮಾಂತರ: ಕುಂಬ್ರದಲ್ಲಿ ಇದುವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಶಾಂತಿ ಸೌಹಾರ್ದಕ್ಕೆ ಇಲ್ಲಿನ ವರ್ತಕರು ಸೇರಿದಂತೆ ಪ್ರತಿಯೊಬ್ಬರೂ ಸಹಕಾರ ನೀಡಿದ್ದಾರೆ ಎಂದು ಸಂಪ್ಯ ಠಾಣೆಯ ಎಸ್‌ಐ ಜಂಬೂರಾಜ್ ಮಹಾಜನ್ ಹೇಳಿದರು.

ಕುಂಬ್ರ ವರ್ತಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ, ಸಂಘದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞೆ ಬೋಧಿಸಿದರು.

ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆ ವಹಿಸಿದ್ದರು. ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ, ಉದ್ಯಮಿ ಮಹಮ್ಮದ್ ಸಾದಿಕ್ ಹಾಜಿ, ಕೆ.ಆರ್.ಹುಸೈನ್ ದಾರಿಮಿ. ಕುಂಬ್ರ ಕೆಪಿಎಸ್ ಶಾಲಾ ಶಿಕ್ಷಕಿ ಜೂಲಿಯಾನ ಮಸ್ಕರೇನಸ್, ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ, ಗೌರವ ಸಲಹೆಗಾರ ವಕೀಲ ದುರ್ಗಾಪ್ರಸಾದ್ ರೈ, ಪಿ.ಎಂ.ಅಬ್ದುಲ್ ರಹೀಮಾನ್ ಹಾಜಿ, ನಿಕಟಪೂರ್ವ ಅಧ್ಯಕ್ಷ ರಫೀಕ್ ಅಲ್‌ರಾಯ, ನೂತನ ಅಧ್ಯಕ್ಷ ಪಿ.ಕೆ.ಮಹಮ್ಮದ್ ಕೂಡುರಸ್ತೆ ಮಾತನಾಡಿದರು.

ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ, ಪುರಂದರ ರೈ ಕೋರಿಕ್ಕಾರು, ಸಂಘದ ಉಪಾಧ್ಯಕ್ಷ ಸದಾಶಿವ ನಾಯ್ಕ ಶೇಖಮಲೆ, ಜತೆ ಕಾರ್ಯದರ್ಶಿ ರೇಷ್ಮಾ ಮೆಲ್ವಿನ್ ಮತ್ತಿತರರು ಉಪಸ್ಥಿತರಿದ್ದರು.

ಕೋಶಾಧಿಕಾರಿ ರಮೇಶ್ ಆಳ್ವ ಕಲ್ಲಡ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭವ್ಯಾ ರೈ ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net