ಸದಸ್ಯತ್ವ ಅಭಿಯಾನ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮದಿಹಾಳದ ಚಿದಂಬರ ಸೇವಾ ಸಮಿತಿ ವತಿಯಿಂದ ನಗರದಲ್ಲಿ ಅ. 17ರಂದು ಸದಸ್ಯತ್ವ ಅಭಿಯಾನದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಲಕ್ಷ್ಮಣ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದಿಹಾಳದ ಜೋಶಿ ಮಂಗಲ ಕಾರ್ಯಾಲಯದಲ್ಲಿ ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ರ್ಗುಲಹೊಸೂರಿನ ದಂಡಪಾಣಿ ದೀಕ್ಷಿತ, ಗಾಮನಗಟ್ಟಿಯ ಗುರುಚಿದಂಬರ ದೀಕ್ಷಿತ, ಬಡ್ಲಿಯ ಗಂಗಾಧರ ದೀಕ್ಷಿತ, ಸವದತ್ತಿಯ ಗಂಗಾಧರ ದೀಕ್ಷಿತ ಹಾಗೂ ಅಗಡಿ ಅನಂದವನ ವಿಶ್ವನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜೇಶ್ವರಿ ಶಾಸ್ತ್ರಿ, ಸಿ. ಆರ್​. ಜೋಶಿ, ಶಂಕರಭಟ್ಟ ಜೋಶಿ, ಸತ್ಯನಾರಾಯಣಾಚಾರ್ಯ, ಹನಮಂತಭಟ್ಟ ಠಕ್ಕಳಕಿ ಉಪಸ್ಥಿತರಿರುವರು ಎಂದರು.
ಸೋನಿಯಾ ಎಜುಕೇಶನ್​ ಟ್ರಸ್ಟ್​ ಮುಖ್ಯಸ್ಥ ಹನುಮಂತ ಡಂಬಳ ಹಾಗೂ ಕಾಂಗ್ರೆಸ್​ ಮುಖಂಡ ದೀಪಕ ಚಿಚೋರೆ ಕಾರ್ಯಕ್ರಮ ಉದ್ಘಾಟಿಸುವರು. ಪಾಲಿಕೆ ಸದಸ್ಯ ವಿಷ್ಣುತಿರ್ಥ ಕೊರ್ಲಹಳ್ಳಿ, ವಕೀಲ ಆರ್​.ಡಿ. ಕುಲಕರ್ಣಿ, ಉದ್ಯಮಿ ರವಿ ದೇಶಪಾಂಡೆ, ಎನ್​.ಆರ್​ ಕುಲಕರ್ಣಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಚಿಂತಕ ದುಷ್ಯಂತ ನಾಡಗೌಡ ಅಧ್ಯಕ್ಷತೆ ವಹಿಸುವರು. ಚಿಂದಬರ ಸೇವಾ ಸಮಿತಿಯನ್ನು ಆಧ್ಯಾತ್ಮಿಕ ಮತ್ತು ಲೌಕಿಕ ಶ್ರದ್ಧಾ ಕೇಂದ್ರವನ್ನಾಗಿ ಬಲಪಡಿಸುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಸುರೇಶ ಕುಲಕರ್ಣಿ, ರಾಮತೀರ್ಥ, ಶಿವರಾಮ ಶಿರಗುಪ್ಪಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net