ಸರಗೂರಿನ ವಿವಿಧೆಡೆ ಸದಸ್ಯತ್ವ ಅಭಿಯಾನ

25 SARAG 1
ಸರಗೂರು ತಾಲೂಕಿನ ದಡದಹಳ್ಳಿ ಗ್ರಾಮದ ಮಠದ ಶ್ರೀ ಷಡಕ್ಷರಿ ಸ್ವಾಮೀಜಿ ನೇತೃತ್ವದಲ್ಲಿ ಸದಸ್ಯತ್ವ ಅಭಿಯಾನ ನಡೆಯಿತು. ನಟರಾಜು, ಗುರುಸ್ವಾಮಿ, ಸಿದ್ದಪ್ಪ , ಗಣಪತಿ, ಡಿ.ಸಿ. ಸಿದ್ದಪ್ಪ, ಮಾದಪ್ಪ, ಶಿವಾನಂದ ಮೂರ್ತಿ ಇತ್ತರರು ಇದ್ದರು.
Published on

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಯೋಜನೆ

ಸರಗೂರು: ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ವತಿಯಿಂದ ಶುಕ್ರವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸದಸ್ಯತ್ವ ಅಭಿಯಾನ ನಡೆಯಿತು.

ದಡದಹಳ್ಳಿ ಮಠದ ಶ್ರೀ ಷಡಕ್ಷರ ಸ್ವಾಮೀಜಿ ನೇತೃತ್ವದಲ್ಲಿ ದಡದಹಳ್ಳಿ, ಬಾಡಗ, ಬಿ ಮಟಕರೆ, ದೇವಲಾಪುರಹುಂಡಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಸದಸ್ಯತ್ವ ನೋಂದಣಿ ಮಾಡಲಾಯಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ 100 ರಿಂದ 200 ಜನ ಸದಸ್ಯತ್ವ ಪಡೆದುಕೊಂಡು ಜನಾಂಗದ ಸಂಘಟನೆ ಸಹಕರಿಸಬೇಕು. ತಾಲೂಕು ಮಟ್ಟದಿಂದ 1000 ಕ್ಕಿಂತ ಹೆಚ್ಚು ಸದಸ್ಯತ್ವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಎಸ್.ವೀರಭದ್ರಪ್ಪ, ಬಸವ ಬಳಗ ಅಧ್ಯಕ್ಷ ಗಣಪತಿ, ನಿರ್ದೇಶಕರಾದ ಡಿ.ಸಿ. ಸಿದ್ದಪ್ಪ. ಮಾದಪ್ಪ, ಶಿವಾನಂದ ಮೂರ್ತಿ, ಗ್ರಾಮದ ಮುಖಂಡರಾದ ಡಿ.ಪಿ. ನಟರಾಜ್, ಗಿರೀಶ್, ಮಹೇಶ್, ಜಯರಾಜ್, ಮಹದೇವಪ್ಪ , ಇಂದ್ರಪ್ಪ, ಶಿವಪ್ಪ, ಶಿವಕುಮಾರ್, ಮಾದೇವಪ್ಪ, ಜಯಕುಮಾರ್, ಶಿವಾನಂದ, ಯುವ ಸಮಿತಿ ಅಧ್ಯಕ್ಷ ನಂದೀಶ್, ಗಿರೀಶ್ , ಹಂಚೀಪುರ ಬಸವಣ್ಣ, ಸ್ವಾಮಿ, ರವಿಕುಮಾರ್ , ಸೋಮಶೇಖರ್,ಪಾಪಣ್ಣ , ಪ್ರಕಾಶ್, ಬಸವಣ್ಣ, ನಂಜಪ್ಪ, ಅಣ್ಣಯ್ಯ, ಪುಟ್ಟಪ್ಪ , ಸುರೇಶ್, ಸಿದ್ದಪ್ಪ , ಮಣಿ, ಪ್ರತಾಪ , ಸುರೇಶ , ಸಿದ್ದಪ್ಪ , ರಘು, ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net