ಮಹಿಳಾ ಮಂಡಳಗಳ ಸದಸ್ಯರಿಂದ ವಿಜಯವಾಣಿ ಮುದ್ರಣ ವಿಭಾಗ ವೀಕ್ಷಣೆ

27 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ವಿವಿಧ ಮಹಿಳಾ ಮಂಡಳಗಳ ಸದಸ್ಯರು ವರೂರಿನಲ್ಲಿರುವ `ವಿಜಯವಾಣಿ' ಮುದ್ರಣ ವಿಭಾಗಕ್ಕೆ ಶುಕ್ರವಾರ ಭೇಟಿ ನೀಡಿದ್ದರು. ಕನ್ನಡದ ನಂ. ೧ ಪತ್ರಿಕೆ `ವಿಜಯವಾಣಿ'ಯ ಮುದ್ರಣದ ವಿವಿಧ ಹಂತಗಳ ಮಾಹಿತಿ ಪಡೆದು ಸಂತಸ ಪಟ್ಟರು.

ನಗರದ ಹೊಸ ಎಪಿಎಂಸಿ ಪ್ರದೇಶದ ಶ್ರೀ ಕರಿಯಮ್ಮ ದೇವಿ ಮಹಿಳಾ ಮಂಡಳ ಮತ್ತು ಮದಿಹಾಳದ ಲಕ್ಷ್ಮೀ ನರಸಿಂಹ ಮಹಿಳಾ ಮಂಡಳದ ಬಹುತೇಕ ಮಹಿಳೆಯರು ಪತ್ರಿಕೆ ಆರಂಭವಾದಾಗಿನಿ0ದ `ವಿಜಯವಾಣಿ' ಓದುಗರಾಗಿದ್ದಾರೆ. ಅನೇಕರಿಗೆ ಮುದ್ರಣದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿತ್ತು. ಅವರ ಆಶಯದಂತೆ ಮುದ್ರಣ ವಿಭಾಗಕ್ಕೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗಿತ್ತು. ಪ್ರಿಂಟಿ0ಗ್ ವಿಭಾಗದ ಹೊಸ ತಂತ್ರಜ್ಞಾನವನ್ನು ಕುತೂಹಲದಿಂದ ವೀಕ್ಷಿಸಿದರು.

`ವಿಜಯವಾಣಿ' ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಅವರು ಸಂಪಾದಕೀಯ ವಿಭಾಗದಿಂದ ಪತ್ರಿಕೆ ವಿನ್ಯಾಸವಾಗುವುದು, ಮುದ್ರಣಕ್ಕೆ ಪ್ಲೇಟ್ ತಯಾರಿ, ಮುದ್ರಣ, ಪ್ಯಾಕಿಂಗ್, ಸಾಗಣೆ ಮತ್ತು ಓದುಗರ ಮನೆಗೆ ವಿತರಣೆಯಾಗುವವರೆಗಿನ ಹಂತಗಳನ್ನು ತಿಳಿಸಿದರು.

ವಿಆರ್‌ಎಲ್ ಮೀಡಿಯಾ ಪ್ರೈ.ಲಿ.ನ ಪ್ರೊಡಕ್ಷನ್ ಡಿಜಿಎಂ ರಾಜೀವಗೌಡ ಕರಿಗೌಡರ ಅವರು ಪತ್ರಿಕೆ ಮುದ್ರಣದ ವಿವಿಧ ಮಜಲುಗಳನ್ನು ವಿವರಿಸಿದರು. ವಿಶೇಷ ಅನುಭವ ಪಡೆದ ಮಹಿಳೆಯರು ವಿಜಯವಾಣಿ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net