

ಮಡಿಕೇರಿ: ಜಿಲ್ಲಾ ವಕ್ಛ್ ಸಮಿತಿಗೆ ಬಿಜೆಪಿಯೇತರ ಪಕ್ಷದ ಸದಸ್ಯರಿಗೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಿದ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಸದಸ್ಯರಿಗೆ ವಕ್ಛ್ ಬೋರ್ಡ್‌ನ ತಿಳುವಳಿಕೆಯಿಲ್ಲ ಎಂದು ವಕ್ಛ್ ಸಲಹಾ ಸಮಿತಿಯ ಉಪಾಧ್ಯಕ್ಷ ಪಿ.ಎಂ.ಲತೀಫ್ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಳಿಕೆ ನೀಡುವ ಮೊದಲು ವಕ್ಛ್ ಮಂಡಳಿ ಎಂದರೆ ಏನು? ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅರಿಯಬೇಕು. ವಕ್ಛ್ ಮಂಡಳಿ ಎಂದರೆ ಸರ್ಕಾರದ ನಿಗಮ ಮಂಡಳಿಯಂತೆ ಭಾವಿಸಿದ್ದಾರೆ. ಸರ್ಕಾರ ಹೇಳಿದಂತೆ ಮಾತ್ರ ಕಾರ್ಯ ಚರಿಸುವ ನಿಗಮ ವಕ್ಛ್ ಮಂಡಳಿಯಲ್ಲ ಎಂದ ಅವರು, ಬಿಜೆಪಿಯೇತರ ಪಕ್ಷದವರು ಬಿಜೆಪಿ ಸೇರಲಿ ಎನ್ನುವವರು ಕಾಂಗ್ರೆಸ್ ಸೇರ್ಪಡೆಗೊಳ್ಳಲ್ಲಿ ಎಂದು ಹೇಳಿದರು.
ವಕ್ಛ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಸದಸ್ಯ ಎಂ.ಬಿ.ಹಮೀದ್ ಮಾತನಾಡಿ, ತನ್ವೀರ್ ಶೇಟ್‌ರವರು ಹಂಗಾಮಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಶೇ.೫೦-೫೦ ಆದೇಶ ಮಾಡಿತ್ತು. ಅದರಂತೆ ರಾಜ್ಯದಲ್ಲಿ ೧೩ ಸೀಟ್ ಬಿಜೆಪಿ, ೧೩ ಕಾಂಗ್ರೆಸ್‌ಗೆ ಇಂದಿಗೂ ನೀಡಲಾಗುತ್ತಿದೆ. ಎಲ್ಲರೂ ಸಮನ್ವಯಯತೆಯನ್ನು ಪಾಲಿಸಿಕೊಂಡು ಹೋಗಬೇಕೆಂದ ಅವರು, ಏನು ತಿಳಿಯದೆ ಬಾಲಿಶ ಹೇಳಿಕೆ ನೀಡಬಾರದು. ತಾಕತ್ತಿದ್ದರೆ ಜಿಲ್ಲಾ ಸಮಿತಿಯನ್ನು ವಿಸರ್ಜಿಸಲಿ ಎಂದು ಸವಾಲು ಹಾಕಿದರು.