ಸದಸ್ಯರು ಸಭೆಗಳಿಗೆ ತಪ್ಪದೇ ಹಾಜರಾಗಿ

09 HHR P 05
ಕೈಮರದ ಶಿವ ಪತ್ತಿನ ಸಂಘದಲ್ಲಿ ಸರ್ವ ಸದಸ್ಯರ ಮಹಾಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಚ್.ಬಸಪ್ಪ, ಎಚ್.ಎಂ.ಚಂದ್ರಪ್ಪ, ಎಚ್.ಎನ್.ನಾಗರಾಜ್, ಕೆ.ಎಸ್.ಜೀವನ್ ಇತರರಿದ್ದರು.
Published on

ಹೊಳೆಹೊನ್ನೂರು: ಸಂಘದಲ್ಲಿ ನಡೆಯುವ ಸಭೆಗಳಿಗೆ ಸದಸ್ಯರು ನಿಯಮಿತವಾಗಿ ಹಾಜರಾಗಬೇಕು ಎಂದು ಶಿವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಸಪ್ಪ ಹೇಳಿದರು.

ಸಮೀಪದ ಅರಹತೊಳಲು ಕೈಮರದಲ್ಲಿ ಶನಿವಾರ ಶಿವ ಪತ್ತಿನ ಸಹಕಾರ ಸಂಘದ 5ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿದ ಅವರು, ಸಂಘ ಆರಂಭದಲ್ಲಿ 16 ಲಕ್ಷ ರೂ. ಲಾಭ ಗಳಿಸಿರುವುದು ಆಶಾದಾಯಕ ಬೆಳವಣಿಗೆ. ಷೇರುದಾರರ ಸಂಖ್ಯೆಗಳ ಹೆಚ್ಚಳಕ್ಕೆ ಶ್ರಮಿಸಲಾಗುತ್ತಿದೆ. ಕಟ್ಟಡ ನಿಧಿಯನ್ನು ಬಳಸಿಕೊಂಡು ಸದಸ್ಯದಲ್ಲೇ ನೂತನ ಕಟ್ಟಡ ಹೊಂದಲಾಗುವುದು. ಷೇರುದಾರರು ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಉಪಾಧ್ಯಕ್ಷ ಎಚ್.ಎಂ.ಚಂದ್ರಪ್ಪ, ಮುಖ್ಯ ಕಾರ್ಯನಿರ್ವಣಾಧಿಕಾರಿ ಕೆ.ಎಸ್.ಜೀವನ್, ಪ್ರಮುಖರಾದ ಪತ್ರೇಶಪ್ಪ, ತೀರ್ಥಯ್ಯ, ರುದ್ರೇಶಪ್ಪ, ಎಚ್.ಎನ್.ನಾಗರಾಜ್, ಶಿವರಾಜ್, ಕುಮಾರಸ್ವಾಮಿ, ನಟರಾಜ್ ಗೌಡ, ಬಿ.ಎನ್.ರೂಪಾ, ಸುಚಿತ್ರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net