

ಕುಮಟಾ: ಗೋವಾದ ಪಣಜಿಯಲ್ಲಿ ಇತ್ತೀಚೆಗೆ ಜರುಗಿದ 2023-24ನೇ ಸಾಲಿನ ಲಯನ್ಸ್ ಜಿಲ್ಲಾ ಗವರ್ನರ್ ಪದಗ್ರಹಣ ಸಮಾರಂಭದಲ್ಲಿ ಕುಮಟಾ ಲಯನ್ಸ್ ಕ್ಲಬ್‌ನ ಅಧ್ಯಕ್ಷ ದಾಮೋದರ ವೆಂಕಟೇಶ ಭಟ್ಟ ಅವರಿಗೆ ಅಂತಾರಾಷ್ಟ್ರೀಯ ಮೆಲ್ವಿನ್ ಝೋನ್ಸ್ ಫೆಲೋ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಲಯನ್ಸ್ ಇಂಟರ್‌ನ್ಯಾಶನಲ್ ಅಧ್ಯಕ್ಷ ಬ್ರಾಯನ್ ಶಿಯಾನ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಗೋವಾ ಸಿಎಂ ಡಾ. ಪ್ರಮೋದ ಸಾವಂತ, ಪಿಎಂಜಿಎಫ್ ವಂಶಿಧರಬಾಬು, ಅರ್ಲಬ್ರಿಟೋ, ಪಿಎಂಜಿಎಫ್ ಗಿರೀಶ ಕುಚಿನಾಡ, ಝೋನ್ಸ್ ಚೇರ್ಮನ್ ವಿನಯಾ ಹೆಗಡೆ, ಕಾರ್ಯದರ್ಶಿ ಮಾಧವ ಕೇಶವ ಶಾನಭಾಗ, ಎಂಜಿಎಫ್ ಮಂಗಲಾ ಬಿ. ನಾಯಕ, ಎಂಜಿಎಫ್ ಎಸ್.ಎಸ್. ಹೆಗಡೆ, ಜಯಲಕ್ಷ್ಮೀ ದಾಮೋದರ ಭಟ್ಟ ಇತರರು ಇದ್ದರು.