

ಮೇಲುಕೋಟೆ : ಮೇಲುಕೋಟೆಯಲ್ಲಿ ಪ್ರಾಚೀನ ಶಿಲಾಯುಗದ ಕುರುಹುಗಳು ಕಂಡು ಬರುತ್ತವೆ ಎಂದು ಹವ್ಯಾಸಿ ಇತಿಹಾಸ ಸಂಶೋಧಕರೂ ಆದ ಶಿಕ್ಷಕ ರಂಗಸ್ವಾಮಿ ತಿಳಿಸಿದರು. ಮೇಲುಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ವಿಭಾಗ ಮತ್ತು ರಾಜತರಂಗಿಣಿ ವೇದಿಕೆ ವತಿಯಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಮಂಡ್ಯ ಜಿಲ್ಲೆಯ ಶಿಲಾಯುಗದ ನೆಲೆಗಳು ಹಾಗೂ ಐತಿಹಾಸಿಕ ಸ್ಮಾರಕಗಳ ಬಗೆಗಿನ ಒಂದು ನೋಟ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹಳೇ ಶಿಲಾಯುಗ ಹಾಗೂ ಹೊಸ ಶಿಲಾಯುಗದಲ್ಲಿ ಮೇಲುಕೋಟೆ ಸುತ್ತಮುತ್ತಲ ಬೆಟ್ಟಗುಡ್ಡಗಳಲ್ಲಿ ಆದಿ ಮಾನವರು ವಾಸವಾಗಿದ್ದರು ಎಂಬುದಕ್ಕೆ ಸಾಕಷ್ಟು ಸಾಕ್ಷಾಧಾರ ಲಭಿಸುತ್ತವೆ. ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ಹಲವು ಪಳಯುಳಿಕೆ ಕಾಣಬಹುದಾಗಿದೆ. ಹಲವು ವಿಶ್ವವಿದ್ಯಾನಿಲಯಗಳ ಸಂಶೋಧಕರು, ಇತಿಹಾಸ ತಜ್ಞರು ಸಂಶೋಧನೆ ನಡೆಸಿ ಕರುಹುಗಳನ್ನು ಪತ್ತೆಹಚ್ಚಿದ್ದಾರೆ. ಹೀಗಾಗಿ ಮೇಲುಕೋಟೆ ಇತಿಹಾಸದ ಪುಟಗಳು ನಮ್ಮನ್ನು ಕ್ರಿಸ್ತಪೂರ್ವಕ್ಕೂ ಕೊಂಡೊಯ್ಯುತ್ತವೆ ಎಂದರು.
ಮೇಲುಕೋಟೆ ರಾಮಾನುಜರ ಕರ್ಮಭೂಮಿಯಾಗಿದೆ. ಕರ್ನಾಟಕದ ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಮಹಾರಾಜರು ಹಲವಾರು ಐತಿಹಾಸಿಕ ಕೊಡುಗೆ ನೀಡಿದ್ದು, ಇದಕ್ಕೆ ಭವ್ಯಸ್ಮಾರಕಗಳೇ ಸಾಕ್ಷಿಯಾಗಿವೆ. ಚೆಲುವನಾರಾಯಣಸ್ವಾಮಿಯ ದಿವ್ಯಕ್ಷೇತ್ರ ಮೇಲುಕೋಟೆ ಪ್ರಖ್ಯಾತ ಕ್ಷೇತ್ರವಾಗಿರುವ ಜತೆಗೆ ಐತಿಹಾಸಿಕ ಮಹತ್ವದ ಸಂಗತಿಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ ಎಂದು ಅಭಿಪ್ರಾಯಿಸಿದರು.
ವಿಷಯದ ಕುರಿತು ವಿಶೇಷ ಉಪನ್ಯಾಸದ ಜತೆಗೆ ತಾವು ಸಂಶೋಧಿಸಿದ ಶಿಲಾ ನೆಲೆಗಳು, ಸಮಾಧಿಗಳು ಹಾಗೂ ಸ್ಮಾರಕಗಳ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ನಂಜುಂಡಯ್ಯ ವಹಿಸಿದ್ದರು. ಉಪನ್ಯಾಸಕರಾದ ಸಂತೋಷ್, ಪುಟ್ಟರಾಜು, ಸ್ವಾಮಿ, ಶಂಕರ್, ಯೋಗೇಶ್, ಮಹೇಶ್, ಕಾವ್ಯಾ, ಮಾಲಾಶ್ರೀ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಲಕ್ಷ್ಮೀ ಹಯಗ್ರೀವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದ