ಮೇಲುಕೋಟೆ ಸರ್ಕಾರಿ ಶಾಲೆ ವಾರ್ಷಿಕೋತ್ಸವ

31mlk02
Published on

ಮನಸೂರೆಗೊಂಡ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

ಮೇಲುಕೋಟೆ : ಪುತಿನ ಕಲಾಮಂದಿರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ವಾರ್ಷಿಕೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ನೆರವೇರಿತು. ಶತಮಾನ ಕಂಡ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.

ಕನ್ನಡ ಮತ್ತು ಇಂಗ್ಲೀಷ್ ನಾಟಕ, ಸಮೂಹ ನೃತ್ಯ, ದೇಶಭಕ್ತಿಗೀತೆ, ಶಾಲಾ ಪರಿಚಯ, ಶಾಲಾ ವರದಿಯನ್ನು ಪ್ರಸ್ತುತ ಪಡಿಸುವ ಮೂಲಕ ಕಲಾಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ಪಾಲಕರು ಮತ್ತು ನಾಗರಿಕರ ಮೆಚ್ಚುಗೆಗೆ ಮಕ್ಕಳು ಪಾತ್ರರಾದರು. ದಶಾವತಾರ ನೃತ್ಯ, ಗಜಾನನ ಸ್ತುತಿ, ಯಕ್ಷಗಾನ ನೃತ್ಯ, ಮಕ್ಕಳ ಮನೆಯ ಪುಟಾಣಿಗಳ ವಿವಿಧ ವೇಷಭೂಷಣ ಗಳು, ಫ್ಯಾನ್ಸಿ ಡ್ರಸ್ ಅತ್ಯಾಕರ್ಷಕವಾಗಿದ್ದವು. ಖ್ಯಾತ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರು ರಚಿಸಿದ 7ನೇ ತರಗತಿಯ ಪಠ್ಯ ಬಿಲ್ಲಾಹಬ್ಬ, 5ನೇತರಗತಿ ಪರಿಸರದ ಪ್ರಾಣಿಗಳು ಹೇಳುವ ಕಥೆಯನ್ನು ಮಕ್ಕಳು ಮನೋಜ್ಞವಾಗಿ ರಂಗ ಪ್ರಸ್ತುತಿ ಮಾಡಿ ಚಪ್ಪಾಳೆ ಗಿಟ್ಟಿಸಿದರು. 1ರಿಂದ 7ನೇ ತರಗತಿ ವರೆಗಿನ ಶಾಲೆಯಲ್ಲೇ ವ್ಯಾಸಂಗಮಾಡಿ ಹೆಚ್ಚು ಪ್ರಗತಿ ಸಾಧಿಸಿದ ಆಸಿಯಾ ಪರ್ವಿನ್, ಕೃತಿಕಾ, ರೂಪೇಶ ಗೌಡ ಅವರಿಗೆ ಮುಖ್ಯಶಿಕ್ಷಕ ಸಂತಾನ ರಾಮನ್ ತಲಾ 20ಗ್ರಾಂ ಬೆಳ್ಳಿ ನಾಣ್ಯಗಳ ಬಹುಮಾನ ನೀಡಿದರು. ವಿವಿಧ ಸ್ಪರ್ಧೆ ವಿಜೇತರಿಗೆ ವಿದ್ವಾನ್ ಕುಮಾರ್ ಬಹುಮಾನ ಪ್ರಾಯೋಜಿಸಿದ್ದರು. ಪುತಿನ ಟ್ರಸ್ಟ್ ಮತ್ತು ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net