

ಗ್ರಂಥ ಬಿಡುಗಡೆ: ಸಂಶೋಧನಾ ಸಂಸತ್ ಪ್ರಕಟಿಸಿರುವ ಭಗವದ್ ಶ್ರೀ ರಾಮಾನುಜರ ಶ್ರೀಭಾಷ್ಯ ಕಿರು ಪರಿಚಯ, ಹಸ್ತಪ್ರತಿ ಸೂಚಿ ಸ್ತೋತ್ರ-ಸಂಪುಟ 15 ಮತ್ತು ತತ್ವದೀಪ- 2023 ಗ್ರಂಥಗಳ ಬಿಡುಗಡೆಯೂ ನೆರವೇರಲಿದೆ ಎಂದು ಎಸ್. ಕುಮಾರ ವಿವರಿಸಿದ್ದಾರೆ.
ಜ್ಞಾನ ನಿಧಿ ಪುರಸ್ಕಾರ : ಮೇಲುಕೋಟೆಯ ಹಿರಿಯ ವಿದ್ವಾಂಸ ಎಸ್. ನರಸರಾಜ ಭಟ್ಟರ್‌ಗೆ ಇದೇ ಸಂದರ್ಭ ಜ್ಞಾನ ನಿಧಿ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಗುವುದು. ಕೈಂಕರ್ಯನಿಧಿ ಪುರಸ್ಕಾರವನ್ನು ಮೇಲುಕೋಟೆ ಹಿರಿಯ ವಿದ್ವಾಂಸರಾದ ಸ್ಥಾನೀಕಂ ನರಸಿಂಹಾಚಾರ್, ಎಂ.ಕೆ. ಶ್ರೀನಿವಾಸ ಅಯ್ಯಂ ಗಾರ್ ಮತ್ತು ಆರ್. ಕೃಷ್ಣ ಅಯ್ಯಂಗಾರ್‌ಗೆ (ಮರಣೋತ್ತರವಾಗಿ) ಪ್ರದಾನ ಮಾಡಲಾಗುವುದು ಎಂದು ಕುಮಾರ ತಿಳಿಸಿದ್ದಾರೆ.
ಸಂಶೋಧನಾ ಸಂಸತ್‌ನ ಶ್ರೀ ರಾಮಾನುಜ ವೇದಿಕೆಯಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಾ. ಎಂ. ವಿ. ವೆಂಕಟೇಶ್, ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಡಾ. ಎಸ್. ಅಹಲ್ಯಾ, ವಿವಿ ಕುಲಸಚಿವ ವಿಶ್ವನಾಥ ಪಿ. ಹಿರೇಮಠ ಅವರು ಆಗಮಿಸಲಿದ್ದಾರೆಂದು ಸಂಶೋಧನಾ ಸಂಸತ್ ಆಡಳಿತ ಕುಲಸಚಿವ ವಿದ್ವಾನ್. ಎಸ್. ಕುಮಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿಶೇಷ ಆಹ್ವಾನಿತರಾಗಿ ಮೈಸೂರಿನ ಸತ್ಯವತಿ ವಿಜಯ ರಾಘವ ಚಾರಿಟೇಬಲ್ ಟ್ರಸ್ಟ್‌ನ ಡಾ. ಎ. ಪುಷ್ಪಾ ಅಯ್ಯಂಗಾರ್, ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ತಿನ ಸಂಶೋಧನಾ ಸಲಹಾ ಸಮಿತಿ ಸದಸ್ಯರಾದ ವಿದುಷಿ ರಮಾ ಶ್ರೀನಿವಾಸನ್ ಮತ್ತು ಡಾ. ಎನ್. ಶ್ರೀನಿವಾಸನ್ ಆಗಮಿಸಲಿದ್ದಾರೆ.
ಇಲ್ಲಿನ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ಡಿ. 11 ರಂದು ವಿದ್ವತ್ ಸನ್ಮಾನ ಸಭೆ, ಗ್ರಂಥ ಬಿಡುಗಡೆ ಮತ್ತು ರಾಜ್ಯಮಟ್ಟದ ದತ್ತಿ ಸ್ಮಾರಕ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಆಯೋಜಿಸಿದೆ.
ವಿಜಯವಾಣಿ ಸುದ್ದಿಜಾಲ ಮೇಲುಕೋಟೆ :
ವಿದ್ವಾಂಸ ಎಸ್. ನರಸರಾಜ ಭಟ್ಟರ್‌ಗೆ ಜ್ಞಾನ ನಿಧಿ ಪುರಸ್ಕಾರ ಪ್ರದಾನ