ಮೇಲ್ಬ್ರೋ ಶುಗರ್ಸ್ ಕಾರ್ಖಾನೆ ಕಾರ್ಯಾರಂಭ ಇಂದು - ನಿತ್ಯ 6 ಸಾವಿರ ಮೆ.ಟನ್ ಕಬ್ಬು ನುರಿಸುವ ಸಾಮರ್ಥ್ಯ

bkt-8-2
ಬಾಗಲಕೋಟೆ ನಗರದ ಮೇಲ್ಬ್ರೋ ಶುಗರ್ಸ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಮೆಳ್ಳಿಗೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಖಾನೆ ಅಧ್ಯಕ್ಷ ಶಿವಾನಂದ ಮೆಳ್ಳಿಗೇರಿ, ಜನರಲ್ ಮ್ಯಾನೇಜರ್ ಚಂದ್ರಶೇಖರ ಹುಬ್ಬಳ್ಳಿ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
Published on

ಬಾಗಲಕೋಟೆ: ಶಿರೂರರಲ್ಲಿ ಸ್ಥಾಪನೆಗೊಂಡಿರುವ ಮೇಲ್ಬ್ರೋ ಶುಗರ್ಸ್ ಕಾರ್ಖಾನೆ ಸೆ.9 ರಂದು ಕಾರ್ಯಾರಂಭ ಮಾಡಲಿದೆ. ಪ್ರತಿ ನಿತ್ಯ 6 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸಲಾಗುವುದು. ಪ್ರತಿ ಗಂಟೆಗೆ 25.6 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುವುದು ಎಂದು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಮೆಳ್ಳಿಗೇರಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಬ್ಯಾಂಕ್‌ಗಳಿಂದ 175 ಕೋಟಿ ರೂ. ಸಾಲದೊಂದಿಗೆ ಒಟ್ಟು 260 ಕೋಟಿ ರೂ. ಬಂಡವಾಳ ಹೂಡಿ ಕಾರ್ಖಾನೆ ಸ್ಥಾಪಿಸಲಾಗಿದೆ. ಹೊಸ ಮಾದರಿಯ ಯಂತ್ರೋಪಕರಣ ಅಳವಡಿಸಲಾಗಿದೆ. 100 ಎಕರೆ ಪ್ರದೇಶದಲ್ಲಿ ಕಾರ್ಖಾನೆ ನಿರ್ಮಾಣಗೊಂಡಿದೆ ಎಂದರು.

2021 ರ ಮಾರ್ಚ್ ತಿಂಗಳಲ್ಲಿ ಯಂತ್ರೋಪಕರಣಗಳ ಜೋಡಣೆ ಕೆಲಸ ಆರಂಭಿಸಿ 2022 ರ ಏಪ್ರಿಲ್ನಲ್ಲಿ ಪೂರ್ಣಗೊಳಿಸಲಾಯಿತು. ಗ್ರಾಮೀಣ ಭಾಗದಲ್ಲಿ ಸ್ಥಾಪನೆಯಾಗಿರುವ ಕಾರ್ಖಾನೆಯಿಂದ ಸ್ಥಳೀಯರಿಗೆ ಹಾಗೂ ಡಿಪ್ಲೊಮಾ, ಐಟಿಐ ಸೇರಿದಂತೆ ಇನ್ನಿತರ ಶಿಕ್ಷೃಣ ಪಡೆದವರಿಗೆ ಉದ್ಯೋಗ ಅವಕಾಶ ನೀಡಲಾಗಿದೆ. ಅಂದಾಜು 8 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ. ಬಾಗಲಕೋಟೆ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ರೈತರು ಕಬ್ಬು ಪೂರೈಸಲಿದ್ದಾರೆ. ಎಫ್ ಆರ್‌ಪಿ ದರದಂತೆ ಬಿಲ್ ಪಾವತಿಸಲಾಗುವುದು ಎಂದು ತಿಳಿಸಿದರು.

ಕಾರ್ಖಾನೆ ಅಧ್ಯಕ್ಷ ಶಿವಾನಂದ ಮೆಳ್ಳಿಗೇರಿ, ಜನರಲ್ ಮ್ಯಾನೇಜರ್ ಚಂದ್ರಶೇಖರ ಹುಬ್ಬಳ್ಳಿ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net