ಬೆಂಗಳೂರು ತಲುಪಿತು ಮೇಕೆದಾಟು ಪಾದಯಾತ್ರೆ...

Padayathre
Published on

ಬೆಂಗಳೂರು: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಬೆಂಗಳೂರು ಪ್ರವೇಶಿಸಿ, ದಿನದ ಚಟುವಟಿಕೆಯನ್ನು ಮುಗಿಸಿತು.

ಬೆಳಗ್ಗೆ ಬಿಡದಿಯಿಂದ ಆರಂಭವಾದ ಯಾತ್ರೆಗೆ ವಿವಿಧ ಮಠಾಧೀಶರು ಬಲ ತುಂಬಿದರು. ಸಾಂಕೇತಿಕವಾಗಿ ಒಂದಷ್ಟು ದೂರ ಡಿ.ಕೆ. ಶಿವಕುಮಾರ್ ಜತೆ ಹೆಜ್ಜೆ ಹಾಕಿ, ನಾವು ನಿಮ್ಮೊಂದಿಗಿದ್ದೇವೆ ಎಂದು ಆತ್ಮವಿಶ್ವಾಸ ತುಂಬಿದರು.

ಸಂಜೆ ಮಂದಗತಿಯಲ್ಲಿ ಸಾಗಿಬಂದ ಯಾತ್ರೆ ಏಳೂವರೆ ಸುಮಾರಿಗೆ ಕೆಂಗೇರಿಯನ್ನು ಪ್ರವೇಶಿಸಿತು. ಅಂತಿಮವಾಗಿ ದಿನದ ನಿಗದಿತ ಕೊನೆಯ ಸ್ಥಳವನ್ನು ರಾತ್ರಿ ಒಂಬತ್ತು ಗಂಟೆಗೆ ತಲುಪಿತು.

ಮಧ್ಯಾಹ್ನದ ನಂತರ ಯಾತ್ರೆಯು ಕಾರ್ಯಕರ್ತರ ಕೊರತೆಯನ್ನು ಎದುರಿಸಿತು. ಶಾಸಕರ ಕೊರತೆ ಸಹ ಎದ್ದು ಕಾಣಿಸಿತು. ಡಿ.ಕೆ. ಶಿವಕುಮಾರ್ ಕೊನೆಯಲ್ಲಿದ್ದರೆ, ಏಳೂವರೆಗೆ ತಾವಿದ್ದಲ್ಲಿಗೆ ಕಾರು ತರಿಸಿಕೊಂಡ ಸಿದ್ದರಾಮಯ್ಯ ಹೊರಟು ನಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net