

ನರಗುಂದ: ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಹಜರತ್ ಮೆಹೆಬೂಬಸುಭಾನಿ ದರ್ಗಾದ ಉರುಸು ಹಾಗೂ ಲಿಂ. ಶ್ರೀ ಇಮಾಮಸಾಹೇಬರ 19ನೇ ಪುಣ್ಯಸ್ಮರಣೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.
ಪುಣ್ಯ ಸ್ಮರಣೋತ್ಸವದ ಅಂಗವಾಗಿ ಸೋಮವಾರ ರಾತ್ರಿ 9 ಗಂಟೆಯಿಂದ ತಾಲೂಕಿನ ವಿವಿಧ ತಂಡಗಳಿಂದ ಭಜನಾ ಜಾಗರಣೆ ಏರ್ಪಡಿಸಲಾಗಿತ್ತು. ಮಂಗಳವಾರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಅರ್ಭಾಣ ಗಲ್ಲಿಯ ಹಜರತ್ ಮೆಹೆಬೂಬಸುಭಾನಿ ದರ್ಗಾದಿಂದ ಇಮಾಮಸಾಹೇಬರ ಸನ್ನಿಧಿವರೆಗೆ ಗಲೀಫ್ ಮೆರವಣಿಗೆಗೆ ಶರಣ ಬಾಬುಸಾಹೇಬ ಜಮಾದಾರ ಚಾಲನೆ ನೀಡಿದರು.
ದರ್ಗಾದಲ್ಲಿ ಲಕ್ಷ್ಮೀಪೂಜೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು. ಉರುಸು ಫಾತೇಹಾ, ಅನ್ನ ಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಚಾಲನೆ ನೀಡಿದರು. ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ಲ ಅವರನ್ನು ಶರಣರ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಅನೀಲ ಘೋರ್ಪಡೆ, ರಾಘವೇಂದ್ರ ಶೆಟ್ಟಿ, ಜ್ಯೋತಿಬಾ ಕನ್ಸೆ, ಸುಭಾಸ ಘೋರ್ಪಡೆ, ಕಾಸೀಂಸಾಬ ಜಮಾದಾರ, ಮೊಹಮ್ಮದ್ ನಾಯ್ಕರ, ಹಾಫೀಜ್ ರಫೀಕ ಮುಲ್ಲಾನವರ, ಶಿವಪ್ಪ ಬೋಳಶೆಟ್ಟಿ, ರಾಜು ಕಲಾಲ, ಪ್ರಕಾಶ ಹಡಗಲಿ, ಐ.ಪಿ. ಚಂದೂನವರ, ಶಾಂತು ಹೂಲಿ, ಸಚಿನ ಗಡಾದ, ಹುಸೇನಸಾಬ ಭೈರಕದಾರ, ಮುತ್ತಪ್ಪ ಚವರದ, ವಿಷ್ಣು ಸಾಠೆ ಇತರರಿದ್ದರು.