ಭಟ್ಕಳ ಅರ್ಬನ್ ಬ್ಯಾಂಕ್​ಗೆ ಮೆಹಬೂಬಿ ಅಧ್ಯಕ್ಷೆ, ತುಳಿಸಿದಾಸ ಉಪಾಧ್ಯಕ್ಷ

BKL ARBUN BANK
Published on

ಭಟ್ಕಳ: ಪ್ರತಿಷ್ಠಿತ ಭಟ್ಕಳ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್​ನ ನೂತನ ಅಧ್ಯಕ್ಷೆಯಾಗಿ ಮೆಹಬೂಬಿ ಬಾಬಾಲಾಲ್ ಸಾಹೇಬ್ ಪಟೇಲ್ ಹಾಗೂ ಉಪಾಧ್ಯಕ್ಷರಾಗಿ ತುಳಿಸಿದಾಸ ಮಾಸ್ತಿ ಮೊಗೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಭಟ್ಕಳ ಅರ್ಬನ್ ಬ್ಯಾಂಕ್​ನಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಯ್ಕೆಯಲ್ಲಿ ಚುನಾವಣೆ ಅಧಿಕಾರಿಯಾಗಿ ಜಿ.ಕೆ. ಭಟ್ ಕಾರ್ಯನಿರ್ವಹಿಸಿದರು.

ನಿರ್ದೇಶಕರಾದ ಬೀನಾ ವೈದ್ಯ, ಶ್ರೀಕಾಂತ, ಪದ್ಮನಾಭ ಪೈ, ಅಬ್ದುಲ್ ಖಾಲಿಕ್ ಅಬ್ದುಲ್ ಹಾದಿ ಸೌದಾಗರ್, ವಸಂತ ದೇವಾಡಿಗ, ಶ್ರೀಧರ ನಾಯ್ಕ, ರಮೇಶ ಶುಕ್ರ ನಾಯ್ಕ, ರಾಮ ನಾಯ್ಕ, ಮನ್ಯೂಯಲ್ ಎಂ. ಲಿಮಾ, ಗಣಪತಿ ಮೊಗೇರ, ಸಂತೋಷ ಗೊಂಡ, ಸುರೇಶ ಪೂಜಾರಿ, ಮೊಹಮ್ಮದ್ ಅಯುಬ್ ಹಮ್ಜಾ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net