ನರಗುಂದ: ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಸೋಮವಾರ ಬಾಗಲಕೋಟೆಗೆ ತೆರಳುವ ಮಾರ್ಗಮಧ್ಯೆ ಪಟ್ಟಣಕ್ಕೆ ಭೇಟಿ ನೀಡಿದರು. ಶಾಸಕ ಸಿ.ಸಿ. ಪಾಟೀಲ ಅವರ ಮನೆಗೆ ತೆರಳಿ ಕೆಲಸಮಯ ಕಳೆದರು. ಈ ವೇಳೆ ಶಾಸಕರು ವಿಜಯಶಂಕರ್ ಅವರನ್ನು ಸನ್ಮಾನಿಸಿದರು. ಜಿಪಂ ಸಿಇಒ ಭರತ್, ಎಸ್‌ಪಿ ಬಿ.ಎಸ್. ನೇಮಗೌಡ, ಎಡಿಸಿ ಅನ್ನಪೂರ್ಣಾ ಮುದಕಮ್ಮನವರ, ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಮಂಜುನಾಥ ನಡುವಿನಮನಿ, ಬಿಜೆಪಿ ಮುಖಂಡರಾದ ರಾಜುಗೌಡ ಪಾಟೀಲ, ಮಹೇಶಗೌಡ ಪಾಟೀಲ, ಉಮೇಶಗೌಡ ಪಾಟೀಲ, ಸಂಗನಗೌಡ ಪಾಟೀಲ, ವಸಂತ ಜೋಗಣ್ಣವರ, ಶಿವಾನಂದ ಮುತವಾಡ, ಎಂ.ಎಸ್. ಕರಿಗೌಡ್ರ, ಎಮ್.ಎಚ್. ತಿಮ್ಮನಗೌಡ್ರ, ಇತರರಿದ್ದರು.