ಜೈನ ಬಸದಿಗೆ ಮೇಘಾಲಯ ರಾಜ್ಯಪಾಲರ ಭೇಟಿ

IMG-20240823-WA0266
Published on

ಮಂಡ್ಯ: ಶ್ರೀರಂಗಪಟ್ಟಣ ಪಟ್ಟಣದ ಐತಿಹಾಸಿಕ ಜೈನ ಬಸದಿಗೆ ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಶುಕ್ರವಾರ ಭೇಟಿ ನೀಡಿ ಆದಿನಾಥರ ದರ್ಶನ ಪಡೆದರು.


ಶ್ರಾವಣ ಮಾಸದ 3ನೇ ಶುಕ್ರವಾರ ಪ್ರಯುಕ್ತ ಇಲ್ಲಿನ ಜೈನ ಬಸದಿಗೆ ಭೇಟಿ ನೀಡಿದ ಅವರು 1008ನೇ ಶ್ರೀಆದಿನಾಥ ತೀರ್ಥಂಕರರಿಗೆ ಅರ್ಚಕ ಸನ್ಮತಿ ಅವರ ಸಮ್ಮುಖದಲ್ಲಿ ನಮಿಸಿದ ಅವರು ವಿಶೇಷ ಪೂಜೆ ಸಲ್ಲಿಸಿದರು.


ಇದಕ್ಕೂ ಮೊದಲು ಪಟ್ಟಣಕ್ಕೆ ಆಗಮಿಸಿದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅವರನ್ನು ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ನೇತೃತ್ವದಲ್ಲಿ ಯುವನಾಯಕ ಎಸ್.ಸಚ್ಚಿದಾನಂದ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಜಿಲ್ಲಾ ಕಾರ್ಯದರ್ಶಿ ಟಿ.ಶ್ರೀಧರ್ ಅವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಪುರಸಭಾ ಸದಸ್ಯ ಗಂಜಾಂ ಶಿವು, ಎಸ್.ಟಿ.ರಾಜು, ಮುಖಂಡರಾದ ಮೇಳಾಪುರ ಪುಟ್ಟರಾಜು, ಚಂದ್ರಶೇಖರ್, ಬಿ.ಸಿ.ಕೃಷ್ಣೇಗೌಡ, ಎಂ.ವಿ.ಕೃಷ್ಣ, ಶುಭಾಶ್ ಜೈನ್, ಲಕ್ಷ್ಮೀನಾರಾಯಣ್, ಪ್ರಭಾಕರ್ ಗುಪ್ತ, ಚಂದನ್, ಕಿರಣ್ ಸಿಂಗ್ ಇತರರು ಇದ್ದರು. ಟೌನ್ ಠಾಣೆ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್, ಪಿಎಸ್‌ಐ ಶಿವಲಿಂಗ ದಳವಾಯಿ, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್ ಹಾಗೂ ಸಿಬ್ಬಂದಿ ಭದ್ರತೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net