ಮಂಗಳೂರು: ಮಂಗಳೂರಿನ ಕುದುರೆಮುಖ ಕಂಪನಿಯ ಸಿಐಎಸ್‌ಎಫ್ ಯುನಿಟ್, ಕೆಐಓಸಿಎಲ್ ಮಂಗಳೂರಿನ ವತಿಯಿಂದ ನಗರದ ಕಾವೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರ ಹಾಗೂ ಕುದುರೆಮುಖ ಕಾಲೊನಿಯಲ್ಲಿ ‘ಮೆಗಾ ಪ್ಲಾಂಟೇಷನ್ ಡ್ರೈವ್’ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗಿಡ ನೆಡುವ ಮೂಲಕ ಚಾಲನೆ ನೀಡಿದ ಕೆಐಒಸಿಎಲ್ ಸಿಐಎಸ್‌ಎಫ್ ಘಟಕದ ಮಂಗಳೂರಿನ ಮುಖ್ಯಸ್ಥ ಸಂತೋಷ ಕುಮಾರ್. ಪಿ, ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಶಾಲಾ ಮುಖ್ಯಶಿಕ್ಷಕ ಗಂಗಾಧರ್ ಮಾತನಾಡಿ, ಪ್ರತಿಯೊಬ್ಬರು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ. ಆ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಬೇಕೆಂದರು. ಈ ವೇಳೆ ಸಿಐಎಸ್‌ಎಫ್ ಸಿಬ್ಬಂದಿ ಹಾಗೂ ಸಂರಕ್ಷಿಕ ಗ್ರೂಪ್‌ನ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.