

ಮಂಡ್ಯ: ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಬೂತ್ ಮಟ್ಟದ ಏಜೆಂಟ್‌ಗಳು ಬದಲಾಗಿದ್ದಲ್ಲಿ, ಅದರ ವಿವರದೊಂದಿಗೆ ಏಜೆಂಟ್‌ಗಳ ವಿವರವನ್ನು ಚುನಾವಣಾ ಶಾಖೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷದ ಮುಖಂಡರ ಸಭೆ ನಡೆಸಲಾಗುತ್ತಿದೆ ಎಂದರು.
ಚುನಾವಣೆ ನಡೆಸುವ ನಿಯಮ ಹಾಗೂ ಮತದಾರರ ನೋಂದಣಿ, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಇತರೆ ಚುನಾವಣಾ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಅಂತೆಯೇ ರಾಜಕೀಯ ಪಕ್ಷದ ಪ್ರತಿನಿಧಿಗಳಿಂದ ಯಾವುದಾದರೂ ಸಲಹೆಗಳಿದ್ದಲ್ಲಿ ತಿಳಿಸಬಹುದು. ಮುಖ್ಯವಾಗಿ ಮತಗಟ್ಟೆ ಮಟ್ಟದ ಏಜೆಂಟರ ನೇಮಕ ಮಾಡಿ ಮಾಹಿತಿ ನೀಡಲು ಸೂಚಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಚುನಾವಣಾ ತಹಸೀಲ್ದಾರ್ ರವಿಶಂಕರ್, ರಾಜಕೀಯ ಪಕ್ಷದ ಪ್ರತಿನಿಗಳಾದ ಡಿ.ರಮೇಶ್, ಸುಂಡಹಳ್ಳಿ ಮಂಜುನಾಥ್, ದಿನೇಶ್, ಬೂದನೂರು ಬೊಮ್ಮಯ್ಯ ಇದ್ದರು.