ಸಭೆ ಇಂದು

WEB LOGO
Published on

ಧಾರವಾಡ: ಕನ್ನಡ ಭಾಷೆಯ ಉಗಮದ ಕುರಿತಂತೆ ತಮಿಳಿನ ಹಿರಿಯ ನಟ ಕಮಲ್​ ಹಾಸನ ಹೇಳಿಕೆ ಕುರಿತು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಹಾಗೂ ಸಂಘದ ಮುಂದಿನ ನಡೆ ಕುರಿತು ಚರ್ಚಿಸಲು ಜೂ. 2ರಂದು ಸಂಜೆ 5 ಗಂಟೆಗೆ ಸಂಘದಲ್ಲಿ ಸಾಹಿತಿಗಳ, ಭಾಷಾ ತಜ್ಞರ, ಹೋರಾಟಗಾರರ, ಚಿಂತಕರ, ಭಾಷಾ ಪ್ರೇಮಿಗಳ, ಕಲಾವಿದರ ಸಭೆ ಏರ್ಪಡಿಸಲಾಗಿದೆ. ಸಭೆಗೆ ಎಲ್ಲರೂ ಆಗಮಿಸಿ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net