

ರಾಯಚೂರು ತಾಲೂಕಿನ ಏಗನೂರು, ಯರಮರಸ್,ದಂಡ್ ಗ್ರಾಮಗಳ ೧೩೦.೪೩ ಹೆಕ್ಟರ್ ಪ್ರದೇಶದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಉದ್ದೇಶಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಪರಿಸರ ಸಂರಕ್ಷಣೆ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಂದು ಜಿಲ್ಲಾಽಕಾರಿ ನಿತೀಶ್ ಕೆ.ಹೇಳಿದರು.
ನಗರದ ಯರಮರಸ್ ಸರ್ಕ್ಯೂಟ್ ಹೌಸ್‌ನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಸಹಯೋಗದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿಮಾನ ನಿಲ್ದಾಣದಿಂದಾಗಿ ಪರಿಸರಕ್ಕೆ ಹಾನಿಯಾಗದಂತೆ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸರ ಸಂರಕ್ಷಣೆಗೆ ಆರಂಭದಲ್ಲಿ ೧೩ ಕೋಟಿ ಬಂಡವಾಳ ಹಾಗೂ ವಿಮಾನ ನಿಲ್ದಾಣ ಬಳಿಕ ೧೬ ಕೋಟಿಯನ್ನು ಅನುದಾನ ಮೀಸಲಿಡಲಾಗಿದೆ.
ನಿಲ್ದಾಣವು ೩೨೨.೩ ಎಕರೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ, ವಿಮಾನ ನಿಲ್ದಾಣಕ್ಕೆ ಈಗಾಗಲೇ ಸಿದ್ದತೆ ಕೈಗೊಳ್ಳುತ್ತಿದ್ದು ಮುಂಚಿತವಾಗಿ, ಪರಿಸರಕ್ಕೆ ತೊಂದರೆಯಾಗದAತೆ, ಕ್ರಮ ವಹಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಯಿಂದ ಈಗಾಗಲೇ ಸಿದ್ದತೆ ಕೈಗೊಡಿದ್ದು, ವಿಮಾ ನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸರ ಸಂರಕ್ಷಣೆಗೆ ಸಂಭವಿ ಸಿದಂತೆ ಸಾರ್ವ ಜನಿಕರ ಸಭೆ ನಡೆಸಿ ಮಾಹಿತಿ ಪಡೆಯಲಾಗುತ್ತಿದ್ದು, ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆರೆಗಳು ಮತ್ತು ಹಳ್ಳ-ಕೊಳ್ಳಗಳ ರಕ್ಷಣೆ ಬಗ್ಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕ್ರಮ ವಹಿಸಲಾಗುತ್ತದೆ ಎಂದರು.
ಪರಿಸರಕ್ಕೆ ಹಾನಿಯಾಗದಂತೆ ಸಾರ್ವಜನಿಕರು ನೀಡಿರುವ ಅಭಿಪ್ರಾಯಗಳ ಮೇಲೆ ಕ್ರಮವಹಿಸುವದಾಗಿ ಹೇಳಿದರು. ಏಗನೂರು ನಿವಾಸಿ ಹನುಮೇಶ ಮಾತನಾಡಿ ವಿಮಾನ ನಿಲ್ದಾಣ ಮಾಡುವ ಮೊದುಲ ಅಲ್ಲಿ ೧೦೮ ಕುಟುಂಬಗಳು ವಾಸ ಮಾಡುತ್ತಿದ್ದು ಈ ಹಿಂದೆ ಸರ್ಕಾರವೇ ಹಕ್ಕುಪತ್ರ ನೀಡಿ ಮನೆಗಳನ್ನು ನಿರ್ಮಿಸಿದೆ. ಆದರೆ ಸ್ಥಳಾಂತರ ಮಾಡಬೇಕು. ಮೂಲಭೂತ ಸೌಕರ್ಯ ಒದಗಿಸಿ ಮನೆಗಳನ್ನು ನಿರ್ಮಿಸಬೇಕು. ವಿಮಾನ ನಿಲ್ದಾಣದ ಸ್ಥಳದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಹಾದು ಹೋಗಿದೆ. ಅಲ್ಲಿಯೇ ರನ್‌ವೇ ನಿರ್ಮಿಸಲಾಗುತ್ತಿದ್ದು
ಕೂಡಲೇ ರನ್‌ವೇ ಮಾರ್ಗ ಬದಲಿಸಭೆಕು ಎಂದರು.
ಹೋರಾಟಗಾರ ಡಾ.ಬಸವರಾಜ ಕಳಸ ಮಾತನಾಡಿ,ಯರಮರಸ್ ಬಳಿ ೬೮ ವರ್ಷಗಳ ಹಿಂದೆ ನೆಹರು ಅವರು ತುರ್ತು ಭೂ ಸ್ಪರ್ಷ ಮಾಡಿ ಪ್ರಾಣ ಉಳಿಸಿದ ಪ್ರದೇಶವಾಗಿದ್ದು, ಅನೇಕ ಕಡೆ ವಿಮಾನ ನಿಲ್ದಾಣ ಗಳಾಗಿವೆ, ಆದರೆ ಇಲ್ಲಿ ಆಗಲಿಲ್ಲ, ಅಂದಿನ ಪ್ರಧಾನಿಗಳಾಗಿದ್ದ ನೆಹರು ಅವರು ವಿಮಾನ ನಿಲ್ದಾಣ ಮಾಡಲು ಅಧ್ಯತೆ ನೀಡಿದ್ದು, ಇಂದಿರಾಗಾAಽ ಅವರು ಜಿಲ್ಲೆಗೆ ಆಗಮಿಸಿದಾಗ ವಿಮಾನ ನಿಲ್ದಾಣ ನಿರ್ಮಾಣ ಭರವಸೆ ನೀಡಿದ್ದರು, ಅಂದಿನಿAದ ಇಂದಿನವರೆಗೂ ಆಗಿಲ್ಲ, ೬೮ ವರ್ಷಗಳ ವಿಮಾನ ನಿಲ್ದಾಣ ಆಗಿದೆ, ಸಾದಕ ಬಾದಕಗಳನ್ನು ಆಲಿಸಬೇಕಾಗಿದೆ,
ಕಲಬುರಗಿ ವಿಮಾನ ನಿಲ್ದಾಣ ಆಗಿದೆ, ಆದರೆ ಈಗ ಪ್ರಯಾಣಿಕರ ಕೊರತೆಯಿಂದ ವಿಮಾನಗಳು ಕಡಿಮೆಯಾಗಿ ಮುಚ್ಚುವ ಸ್ಥಿತಿಗೆ ಬಂದಿದೆ, ಆಗಾಗದಂತೆ, ಮುಂಚಿತವಾಗಿ ಈ ಭಾಗದಲ್ಲಿ ಇಂಡಸ್ಟ್ರಿಗಳು ಹೆಚ್ಚಾಗಬೇಕು, ಅಂತರಾಷ್ಟ್ರೀಯ ಮಟ್ಟದಲ್ಲಿ ಸೋನಾಮಸೂರಿ ಅಕ್ಕಿ, ಹತ್ತಿ ತ-Á್ತಗುತ್ತಿದೆ, ಇಂಡಸ್ಟ್ರಿಗಳು ಇನ್ನೂ ಅಭಿವೃದ್ಧಿ ಪಡೆದ ಬೇಕು, ಇಂಡಸ್ಟ್ರೀಗಳಿಗೆ ಸುಮಾರು ೧೦ ಸಾವಿರ ಎಕರೆ ಭೂಮಿ ಇಡಬೇಕು, ಜಾಗತಿಕ ಬಂಡವಾಳ ಹೂಡಿಕೆ ನಡೆಯುತ್ತಿದ್ದು ಜಿಲ್ಲೆಯ ಪಾತ್ರ ಮುಖ್ಯವಾಗಿದೆ, ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸರ ಸಂರಕ್ಷಣೆ ಮಾಡಬೇಕು, ಬಿಸಿಲಿನ ತಾಪವನ್ನು ಹಚ್ಚಿದೆ, ಎರಡು ವಿದ್ಯುತ್ ಘಟಕಗಳಿಂದ ಪರಿಸರ ಸಂರಕ್ಷಣೆ ಮಾಡುವ ಕೆಲಸ ಆಗಿಲ್ಲ ಜಿಲ್ಲಾಡಳಿತದಿಂದ ನಿರ್ದೇಶನ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಭೀಮರಾಯ ಹದ್ದಿನಾಳ, ಕೆ.ಶಾಂತಪ್ಪ ,ರಘವೀರ್ ನಾಯಕ,ನಗರಸಭೆ ಸದಸ್ಯ ನರಸರೆಡ್ಡಿ,ಸಹಾಯಕ ಆಯುಕ್ತ ಗಜಾನನ ಬಾಳೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಽಕಾರಿ ಪ್ರಕಾಶ, ತಹಶಿಲ್ದಾರ್ ಸುರೇಶ ವರ್ಮಾ ಸೇರಿ ಎರಡು ಗ್ರಾಮಗಳ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳು ಮುಖಂಡರು ಭಾಗವಹಿಸಿದ್ದರು.