ಗ್ರಾವಾಭಿವೃದ್ಧಿ ಯೋಜನೆಯಿಂದ ಪ್ರಗತಿ : ಟ್ರಸ್ಟಿ ಸಂಪತ್ ಸಾವ್ರಾಜ್ಯ ಶ್ಲಾಘನೆ

samavesha
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಬಡ ಜನರ ಏಳಿಗೆಗಾಗಿ ಮತ್ತು ಅವರ ಆದಾಯ ಹೆಚ್ಚಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು 42 ವರ್ಷಗಳ ಹಿಂದೆ ಆರಂಭಿಸಿದ ಗ್ರಾವಾಭಿವೃದ್ಧಿ ಯೋಜನೆಯಿಂದಾಗಿ ಹೆಚ್ಚಿನವರು ಅಭಿವೃದ್ಧಿ ಹೊಂದಿದ್ದಾರೆ ಎಂದು ಯೋಜನೆಯ ಟ್ರಸ್ಟಿ ಸಂಪತ್ ಸಾವ್ರಾಜ್ಯ ಹೇಳಿದರು.

ಇಲ್ಲಿನ ಕನ್ನಡಭವನದಲ್ಲಿ ಮಂಗಳವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಮೂಡುಬಿದಿರೆ ತಾಲೂಕು ಮಟ್ಟದ ಪದಾಧಿಕಾರಿಗಳ ಸವಾವೇಶ ಉದ್ಘಾಟಿಸಿ ಮಾತನಾಡಿದರು.

ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಚೌಟ ಅಧ್ಯಕ್ಷತೆ ವಹಿಸಿದ್ದರು. ಗ್ರಾವಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ದ.ಕ. ಜಿಲ್ಲೆಯ ನಿರ್ದೇಶಕ ಮಹಾಬಲ ಕುಲಾಲ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಬ್ಯಾಂಕ್ ಆಫ್ ಬರೋಡಾದ ಅಸಿಸ್ಟೆಂಟ್ ಮ್ಯಾನೇಜರ್ ನಿತಿನ್ ಬ್ಯಾಂಕ್ ಮತ್ತು ಗ್ರಾವಾಭಿವೃದ್ಧಿ ಯೋಜನೆಗಿರುವ ಸಂಪರ್ಕದ ಬಗ್ಗೆ ವಾಹಿತಿ ನೀಡಿದರು. ಪ್ರೇಮನಾಥ್ ಸಂದ ಮರುಪಾವತಿ ಚೀಟಿ ಬದಲಾವಣೆಯ ಬಗ್ಗೆ ವಾಹಿತಿ ನೀಡಿದರು.

ಯೋಜನಾಧಿಕಾರಿ ಸುನೀತಾ ನಾಯ್ಕ ಸ್ವಾಗತಿಸಿ, ತಾಲೂಕಿನ 2023-24ನೇ ಸಾಲಿನ ಸಾಧನಾ ವರದಿ ಮತ್ತು 2024ರ ಸಾಲಿನ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಇತರ ಕಾರ್ಯಕ್ರಮಗಳ ವರದಿ ಮಂಡಿಸಿದರು. ಮೂಡುಬಿದಿರೆ ವಲಯದ ಮೇಲ್ವಿಚಾರಕಿ ಮಮತಾ ನಿರೂಪಿಸಿದರು. ಆಲಂಗಾರು ವಲಯದ ಮೇಲ್ವಿಚಾರಕ ವಿಟ್ಠಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net