ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭೆ

Published on

ಗೋಣಿಕೊಪ್ಪ: ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 2022-2023ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ಅಧ್ಯಕ್ಷರಾದ ಅಜ್ಜಿ ಕೂಟೀರ ಪ್ರವೀಣ್ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.

ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತವು ಈ ಸಾಲಿನಲ್ಲಿ 27,85,653 ರೂ. ನಿವ್ವಳ ಲಾಭ ಪಡೆದಿರುತ್ತದೆ. ಈ ಸಾಲಿನಲ್ಲಿ ಸದಸ್ಯರಿಗೆ 27.39 ಕೋಟಿ ರೂ.ಗಳನ್ನು ವಿವಿಧ ರೂಪದಲ್ಲಿ ಸಾಲವಾಗಿ ವಿತರಿಸಲಾಗಿದೆ. ಸಂಘದ ಪಾಲು ಬಂಡವಾಳವು 1.67 ಕೋಟಿ ರೂ. ಇದ್ದು, ಸಂಘದಲ್ಲಿ 2,740 ಸದಸ್ಯರಿದ್ದಾರೆ. ಸಂಘದ ವಹಿವಾಟು ಸುಮಾರು 1.69 ಕೋಟಿ ರೂ. ಆಗಿದೆ. ಪ್ರಸಕ್ತ ಸಾಲಿನಲ್ಲಿ ಸಂಘದ ಸದಸ್ಯರ ಪಾಲು ಹಣದ ಮೇಲೆ ಶೇಕಡ 8.5ರ ದರದಲ್ಲಿ ಡಿವಿಡೆಂಟ್‌ಅನ್ನು ವಿತರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಸಂಘದ ಉಪಾಧ್ಯಕ್ಷರು, ಆಡಳಿತ ಮಂಡಳಿ ಪದಾಧಿಕಾರಿಗಳು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ರಂಡ ತಮ್ಮಯ್ಯ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net