ಮಾರ್ಚ್ 24ಕ್ಕೆ ಜನೋದಯ ಅಭಿವೃದ್ಧಿ ಸಹಕಾರ ಸಂಘದ ಸಭೆ

Published on

ಮೈಸೂರು: ರಾಮಕೃಷ್ಣ ನಗರ ಎ ಮತ್ತು ಬಿ ಬ್ಲಾಕ್‌ನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಜನೋದಯ ಅಭಿವೃದ್ಧಿ ಸಹಕಾರ ಸಂಘದ ಪ್ರಥಮ ಸರ್ವ ಸದಸ್ಯರ ಸಭೆ ಮಾ.24 ರಂದು ಆಯೋಜಿಸಲಾಗಿದೆ ಎಂದು ಪ್ರವರ್ತಕರಾದ ವಕೀಲ ರಾಮಕೃಷ್ಣ ತಿಳಿಸಿದರು.
ಸಿದ್ಧಾರ್ಥನಗರದ ಕನಕ ಸಮುದಾಯ ಭವನದಲ್ಲಿ ಅಂದು ಬೆಳಗ್ಗೆ 11ಕ್ಕೆ ಆಯೋಜಿಸಿರುವ ಸಭೆ ನಡೆಯಲಿದೆ. ಗೃಹ ನಿರ್ಮಾಣ, ನಿವೇಶನ ನೀಡಿಕೆ ಮೊದಲಾದ ವಿಷಯ ಅಲ್ಲದೇ ಬ್ಯಾಂಕ್‌ಗಳಲ್ಲಿ ದೊರೆಯುವ ಸಾಲ ಸೌಲಭ್ಯ ಸಂಘದಲ್ಲಿ ಲಭ್ಯವಿರಲಿದೆ. ಸಂಘದಲ್ಲಿ ಇದುವರೆಗೆ 973 ಮಂದಿ ಸದಸ್ಯರಾಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಘದ ಮುಖ್ಯ ಪ್ರವರ್ತಕ ಕೆ.ಎಸ್.ಚಿಕ್ಕೇಗೌಡ, ಪದಾಧಿಕಾರಿಗಳಾದ ಪಿ.ಬಸವರಾಜು, ತಿಮ್ಮೇಗೌಡ, ಮಹದೇವಸ್ವಾಮಿ, ಮಧು, ವೀರೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net