

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಪ್ರಧಾನಮಂತ್ರಿ ನರೇಂದ್ರಮೋದಿ ಎಂಬ ಶಾಶ್ವತವಾದ ಗ್ಯಾರಂಟಿ ಮುಂದೆ ಕಾಂಗ್ರೆಸ್‌ನ 5 ಗ್ಯಾರಂಟಿಗಳ ಆಟ ನಡೆಯುವುದಿಲ್ಲ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವ್ಯಂಗ್ಯವಾಡಿದರು.
ನಗರದ ಸೊಂಡೆಕೊಪ್ಪ ವೃತ್ತದಲಿ ಗುರುವಾರ ಬಿಜೆಪಿ ಕಾರ್ಯಕರ್ತರ ಭೇಟಿ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದಾಗಿ ಉದ್ಭವಿಸಿರುವ ಸಮಸ್ಯೆ ಜತೆಗೆ ರಾಜ್ಯದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮವಾಗಿದೆ. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿಗಳು ಸ್ಥಗಿತವಾಗುವುದು ಗ್ಯಾರಂಟಿ ಎಂದರು.
ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಹುಲ್‌ಗೌಡ ಮಾತನಾಡಿ, ಪ್ರಧಾನಿ ಮೋದಿ ಅವರ ಸುಭದ್ರ ಆಡಳಿತ, ಅಭಿವೃದ್ಧಿ ಕಾರ್ಯಗಳ ಬಗ್ಗೆ ದೇಶದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಅಯೋಧ್ಯೆ ರಾಮಮಂದಿರದಂತಹ ದಿಟ್ಟ ಹೆಜ್ಜೆಗಳು ಮತ್ತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬರುವುದರಲ್ಲಿ ಯಾವುದೇ ಸಂದೇಹ ಇಲ್ಲ. ದೇಶದ ಪ್ರಧಾನಿ ಜತೆ ಯುವಜನತೆ ಇದ್ದಾರೆ ಎಂದರು.
ಭೂನ್ಯಾಯ ಮಂಡಳಿ ಸದಸ್ಯ ಎಚ್.ಆರ್.ಬಸವರಾಜು, ವಕೀಲ ಮಂಜುನಾಥ್, ಮುಖಂಡರಾದ ಶಿವಾಜಿ ರಾವ್ ಶಿಂಧೆ, ಕೆ.ಮುರಳೀಧರ್, ಜಗದೀಶ್ ಹ್ಯಾರೋಕೇತನಹಳ್ಳಿ, ರಾಯರಪಾಳ್ಯ ಮಹೇಶ್, ಮಹಿಮಾ ದಾಸೇಗೌಡ, ಲೀಲಾಮೂರ್ತಿ, ಸ್ನೇಕ್ ರಾಜು, ರುದ್ರೇಶ್, ಪುನೀತ್ ಖಿಲೇದಾರ್ ಮತ್ತಿತರರು ಇದ್ದರು.