ಜು.10ರಂದು ಜೈನ ಸಮುದಾಯದ ಬೃಹತ್ ಮೌನ ಪ್ರತಿಭಟನೆ

IMG-20230708-WA0022.jpg
Published on


ಬೆಳಗಾವಿ: ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ಮಹಾರಾಜರನ್ನು ದುಷ್ಕರ್ಮಿಗಳು ಅಮಾನುಷವಾಗಿ ಹತ್ಯೆ ಮಾಡಿದ್ದನ್ನು ಖಂಡಿಸಿ ಜುಲೈ 10 ರಂದು ಚಿಕ್ಕೋಡಿಯಲ್ಲಿ  ಬೆಳಗಾವಿ ಜಿಲ್ಲಾ ಮಟ್ಟದ ಬೃಹತ್ ಮೌನ ಪ್ರತಿಭಟನೆಯನ್ನು ಜೈನ ಸಮುದಾಯ  ಹಮ್ಮಿಕೊಂಡಿದೆ.
ಪಟ್ಟಣದ ಮಹಾವೀರ ನಗರದ ಜೈನ ಬಸದಿಯಲ್ಲಿ ಕೊಲ್ಹಾಪುರದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ನಾಂದಣಿಯ ಶ್ರೀ ಜಿನಸೇನ ಭಟ್ಟಾರಕ ಭಟ್ಟಾಚಾರ್ಯ ಸ್ವಾಮೀಜಿ ಹಾಗೂ ಹುಬ್ಬಳ್ಳಿ ವರೂರಿನ ಧರ್ಮಸೇನ ಭಟ್ಟಾರಾಕ ಪಟ್ಟಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ದಕ್ಷಿಣ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಮೋಹನ ಶಹಾ , ಮಾಜಿ ಸಚಿವ ವೀರಕುಮಾರ ಪಾಟೀಲ , ಎಸ್ ಟಿ ಮನ್ನೂಳಿ, ಡಾ. ಪದ್ಮರಾಜ ಪಾಟೀಲ, ರವಿರಾಜ ಪಾಟೀಲ, ಡಾ. ಎನ್ ಎ ಮಗದುಮ್, ಬಿ ಎ ಭೋಜಕರ, ಈರಗೌಡ ಪಾಟೀಲ, ವಿನೋದ ದೊಡ್ಡಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net