

ಬೆಳಗಾವಿ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳನ್ನು ತನಿಖೆ ನಡೆಸಿ ತಪ್ಪಿತಸ್ಥ ವಿರುದ್ಧ ಕ್ರಮಕ್ಕೆ ಶಾಸಕ ಅಭಯ ಪಾಟೀಲ ಆಗ್ರಹಿಸಿದರು.
ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಳಪೆ ಕಾಮಗಾರಿ ಕುರಿತು ಸಾರ್ವಜನಿಕರು ದೂರುಗಳಿಗೆ ಶಾಸಕರು ಧ್ವನಿಗೂಡಿಸಿದರು.
ಬೆಳಗಾವಿನಗರಕ್ಕೆ ಸ್ಮಾಟ್ ಸಿಟಿ ಯೋಜನೆ ಅಡಿಯಲ್ಲಿ1000 ಕೋಟಿ ರೂ. ಬಂದಿದೆ.ಅದರಲ್ಲಿ 400 ಕೋಟಿ ರೂ. ಅನುದಾನಮಾತ್ರ ದಕ್ಷಿಣ ಕ್ಷೇತ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಅಲ್ಲದೆ 40 ಇಲಾಖೆಗಳ ಅಡಿಯಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳನ್ನು ತನಿಖೆ ನಡೆಸಿ. ತಪ್ಪಿತಸ್ಥ ವಿರುದ್ಧ ಕ್ರಮ ಜರುಗಿಸಿ. ಸಾರ್ವಜನಿಕರಿಗೂ ಗೊತ್ತಾಗಲಿ.ನಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇಲ್ಲ. ಸಾರ್ವಜನಿಕರು ತಮ್ಮ ಬಳಿಯಿರುವ ಮಾಹಿತಿಗಳನ್ನುನೀಡಿ ಎಂದರು.