

ರಾಯಚೂರು ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಜ್ಯ ಕಾರ್ಯಕಾರಣಿ ಸಭೆಯು ಜು.20 ರಂದು ನಗರದ ಬಂಜಾರ ಭವನದಲ್ಲಿ ಆಯೋಜಿಸಲಾಗಿಂದು ಸೇವಾ ಸಂಘದ ರಾಜ್ಯಾಧ್ಯಕ್ಷ ಪಾಂಡುರಂಗ ಪವಾರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿ, ಸಮಾಜ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿ ಸಮಾಜದ ಬೃಹತ್ ಸಮಾವೇಶ ನಡೆಸು ಕುರಿತು ಚರ್ಚಿಸಲಾಗುತ್ತದೆ. ರಾಜ್ಯ ಕಾರ್ಯಕಾರಣಿ ಸಮಿತಿ ಸಭೆಗೆ ವಿವಿಧ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ರಾಷ್ಟ್ರೀಯ ಮಾಜಿ ಅಧ್ಯಕ್ಷ ಅಮರಸಿಂಗ್ ತಿಲಾವತ್, ಮಾಜಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ.ರಾಮಾನಾಯಕ ಸೇರಿ ಅನೇಕರು ಭಾಗಿಯಾಗಲಿದ್ದಾರೆ. ಸಮಾಜದ ಒಂದು ಲಕ್ಷ ಜನರು ಸೇರಿ ಸಮಾವೇಶ ಮಾಡಲು ಚರ್ಚಿಸುವದು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಸಚಿವರುಗಳನ್ನು ಆಹ್ವಾನಿಸುವ ಕುರಿತು ಚರ್ಚೆಗಳು ನಡೆಯಲಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನಾರಾಯಣಪ್ಪ ನಾಯಕ್,ಗೋವಿಂದರಾಜ ನಾಯ್ಕ , ಜಿವೇಲೆಪ ನಾಯ್ಕ , ಶಿವಣ್ಣ ಪವಾರ, ಲಚ್ಚಪ್ಪ ನಾಯ್ಕ , ಹನುಮಂತು ಚವ್ಹಾಣ ಇದ್ದರು.